ಮರ್ಯಾದೆಗೆ ಅಂಜಿ ಮಗಳನ್ನೇ ಕೊಂದ ತಂದೆ, ಸೂಟ್‌ಕೇಸ್‌ನಲ್ಲಿತ್ತು ಶವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಮೋಡ್‌ಬಂದ್ ಪ್ರದೇಶದ ನಿವಾಸಿ ನಿತೇಶ್ ಯಾದವ್ ಮರ್ಯಾದೆಗೆ ಅಂಜಿ ತನ್ನ ಮಗಳನ್ನೇ ಗುಂಡಿಕ್ಕಿ ಕೊಂಡಿದ್ದಾರೆ. ಮಗಳನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ, ಯಮುನಾ ಎಕ್ಸ್‌ಪ್ರೆಸ್‌ವೇ ಸರ್ವೀಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ಸೂಟ್‌ಕೇಸ್ ಎಸೆದಿದ್ದಾರೆ.

ರಕ್ತಸಿಕ್ತವಾಗಿದ್ದ ಸೂಟ್‌ಕೇಸ್‌ನ್ನು ಸ್ಥಳೀಯರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 21 ವರ್ಷದ ಆಯುಷಿ ಯಾದವ್ ತಂದೆಗೆ ಹೇಳದೇ ಎಲ್ಲಿಯೋ ಹೋಗಿದ್ದಳು. ಮನೆಗೆ ಬಂದ ಮಗಳ ಮೇಲೆ ಕೋಪದಲ್ಲಿ ಕುದಿಯುತ್ತಿದ್ದ ತಂದೆ, ಕೋಪದ ಕೈಗೆ ಬುದ್ದಿ ಕೊಟ್ಟು ಗುಂಡು ಹಾರಿಸಿ ಕೊಂದಿದ್ದಾರೆ.

ನಂತರ ತನ್ನದೇ ಕಾರ್‌ನಲ್ಲಿ ಆಕೆ ದೇಹ ಇಟ್ಟುಕೊಂಡು ಬಿಸಾಡಿ ಬಂದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ತಂದೆ ನಿಜ ಒಪ್ಪಿಕೊಂಡಿದ್ದಾರೆ. ಕೊಲೆ ವೇಳೆ ಮನೆಯಲ್ಲಿ ಆರುಷಿ ತಾಯಿ ಹಾಗೂ ಸಹೋದರ ಇರಲಿಲ್ಲ. ತಾಯಿ ಹಾಗೂ ಸಹೋದರ ಮೃತದೇಹದ ಗುರುತು ಹಿಡಿದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!