ಭಾರತ vs ನ್ಯೂಜಿಲೆಂಡ್: 3 ನೇ ಟಿ 20 ಪಂದ್ಯದಿಂದ ಕೇನ್ ವಿಲಿಯಮ್ಸನ್ ಔಟ್! ಹೊಸ ನಾಯಕನ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೌಂಟ್ ಮೌಂಗನುವಿನ ಬೇ ಓವಲ್ ಮೈದಾನದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 65 ರನ್​ಗಳ ಅಮೋಘ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆ ಸಾಧಿಸಿದೆ. ಆದ್ದರಿಂದ  ಉಳಿದಿರುವ ಒಂದು ಪಂದ್ಯ ನ್ಯೂಜಿಲ್ಯಾಂಡ್‌ ಪಾಲಿಗೆ ನಿರ್ಣಾಯಕವಾಗಿದೆ. ನವೆಂಬರ್ 22 ಮಂಗಳವಾರ ನೆಪಿಯರ್​ನ ಮಕ್​ಲಿನ್ ಪಾರ್ಕ್​ನಲ್ಲಿ ಈ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನವೇ ನ್ಯೂಜಿಲೆಂಡ್‌ ಗೆ ಆಘಾತವೊಂದು ಎದುರಾಗಿದ್ದು ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ತಂಡದಿಂದ ಹೊರಬಿದ್ದಿದ್ದಾರೆ.
ಕೇನ್ ವಿಲಿಯಮ್ಸನ್ 3ನೇ ಟಿ 20 ಪಂದ್ಯದಿಂದ ಮಿಸ್ ಆಗಲಿದ್ದಾರೆ, ಅವರ ಅನುಪಸ್ಥಿತಿಯಲ್ಲಿ ಟಿಮ್ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸೋಮವಾರ ಖಚಿತಪಡಿಸಿದೆ.
ಪೂರ್ವ ನಿಯೋಜಿತ ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕಿರುವ ಕಾರಣದಿಂದ ತೃತೀಯ ಟಿ20 ಯಲ್ಲಿ ಕೇನ್ ಕಣಕ್ಕಿಳಿಯುತ್ತಿಲ್ಲ. ಆದಾಗ್ಯೂ, ಶುಕ್ರವಾರದಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲು ವಿಲಿಯಮ್ಸನ್ ಮರಳಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆ ತಿಳಿಸಿದೆ.
“ಆಕ್ಲೆಂಡ್ ಏಸಸ್ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ ವಿಲಿಯಮ್ಸನ್‌ ಸ್ಥಾನದಲ್ಲಿ ನೇಪಿಯರ್‌ನಲ್ಲಿ ಟಿ 20 ತಂಡವನ್ನು ಸೇರಿಕೊಳ್ಳಲಿದ್ದಾರೆ” ಎಂದು ಅದು ಸೇರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!