ಫಿಫಾ ವಿಶ್ವಕಪ್ ನಲ್ಲಿ ಒಂಟೆ ಜ್ವರದ ಭೀತಿ?: ಈ ಕುರಿತು ಶಾಕಿಂಗ್ ವಿಚಾರ ಬಿಚ್ಚಿಟ್ಟ ವಿಜ್ಞಾನಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕತಾರ್‌ ನಲ್ಲೀಗ ಫಿಫಾ ವಿಶ್ವ ಕಪ್ ನ ಸಂಭ್ರಮ. ಫುಟ್ ಬಾಲ್ ಅಭಿಮಾನಿಗಳು ಇಂದು ಸಂಭ್ರಮದಲ್ಲಿ ಸಾಕ್ಷಿಯಾಗಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಸಂಭ್ರಮಕ್ಕೆ ತಡೆಯೊಡ್ಡಲು ವೈರಸ್ ಒಂದು ಲಗ್ಗೆ ಇಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ನ್ಯೂ ಮೈಕ್ರೊಬ್ಸ್ ಮತ್ತು ನ್ಯೂ ಇನ್ಫೆಕ್ಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಫಿಫಾ ವಿಶ್ವಕಪ್ ಅನ್ನು ವೀಕ್ಷಿಸಲು ಜನರು ಸೇರುತ್ತಿರುವುದರಿಂದ ಕೋವಿಡ್​ ಸೋಂಕಿನ ಇನ್ನೊಂದು ಭಾಗವಾಗಿರುವ ಒಂಟೆ ಜ್ವರದಿಂದ (ಕ್ಯಾಮೆಲ್​ ಫ್ಲೂ) ಬಳಲುವ ಅಪಾಯ ಉಂಟಾಗುವ ಭೀತಿ ಇದೆ.

ಈ ಕುರಿತು ಆತಂಕ ವ್ಯಕ್ತಪಡಿಸುರ್ವಾ ವಿಜ್ಞಾನಿಗಳು , ಕೋವಿಡ್​ ಇನ್ನೂ ಸಂಪೂರ್ಣ ಹೋಗಿಲ್ಲ, ಇದರ ನಡುವೆಯೇ ಕ್ಯಾಮೆಲ್​ ಫ್ಲೂ ಒಕ್ಕರಿಸಿದೆ. ಇದು ವೆಕ್ಟರ್-ಹರಡುವ ರೋಗಗಳಾದ ಚರ್ಮದ ಲೀಶ್ಮೇನಿಯಾಸಿಸ್, ಮಲೇರಿಯಾ, ಡೆಂಗ್ಯೂ, ರೇಬೀಸ್, ದಡಾರ, ಹೆಪಟೈಟಿಸ್ ಎ ಮತ್ತು ಬಿ ಮತ್ತು ಪ್ರಯಾಣಿಕರ ಅತಿಸಾರದ ಕೂಡ ಅಪಾಯವಿದೆ ಎನ್ನಲಾಗಿದೆ.

ಈಗಾಗಲೇ ಎಲ್ಲಾ ರೀತಿಯಿಂದಲೂ ಕತಾರ್ ತನ್ನ ಆರೋಗ್ಯ ಕ್ಷೇತ್ರವನ್ನು ಸಿದ್ಧಗೊಳಿಸಿದ್ದರೂ, ಸೋಂಕುಗಳ ಹರಡುವಿಕೆಯ ಅಪಾಯದ ಕುರಿತುನಿರ್ಲಕ್ಷ್ಯ ವಹಿಸುವಂತಿಲ್ಲ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!