ದೆಹಲಿಯಲ್ಲಿ ಸಂಚರಿಸುತ್ತಿದೆ ಮೊದಲ ಎಲೆಕ್ಟ್ರಿಕ್‌ ಬಸ್:‌ ಶೀಘ್ರವೇ ರಸ್ತೆಗಿಳಿಯಲಿವೆ 300‌ ಬಸ್‌ ಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಪ್ರಾರಂಭಿಸಿದೆ.
ದೆಹಲಿ ಸಾರಿಗೆ ನಿಗಮದ ಮೊದಲ ಎಲೆಕ್ಟ್ರಿಕ್‌ ಬಸ್‌ ಗೆ ದೆಹಲಿ ಸರ್ಕಾರ ಸೋಮವಾರ ಚಾಲನೆ ನೀಡಿದ್ದು, ಏಪ್ರಿಲ್‌ ವೇಳೆಗೆ 300 ವಿದ್ಯುತ್ ಚಾಲಿತ ಬಸ್‌ ಗಳು ರಸ್ತೆಗಿಳಿಯಲಿವೆ.
ಈ ಬಸ್‌ 12 ಮೀಟರ್‌ ಉದ್ದವಾಗಿದ್ದು, ಎಸಿ, ಸಿಸಿಟಿವಿ, ಪ್ಯಾನಿಕ್‌ ಬಟನ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಇದು ದೆಹಲಿಯಲ್ಲಿ ಸಂಚರಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಬಸ್ ಆಗಿದೆ.
ಇನ್ನು ದೆಹಲಿಯಲ್ಲಿ ಹಳೆ ಬಸ್‌ ಗಳ ಜಾಗದಲ್ಲಿ ಕ್ರಮೇಣವಾಗಿ ಎಲೆಕ್ಟ್ರಿಕ್‌ ಬಸ್‌ ಗಳನ್ನು ತರಲಾಗುತ್ತದೆ. ಇದು ಮಾಲಿನ್ಯ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.
ಮುಂಬರುವ ವರ್ಷಗಳಲ್ಲಿ ಸುಮಾರು 2,000 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯ ರೂಪಕ್ಕೆ ತರುವ ಗುರಿ ಸರ್ಕಾರದ್ದಾಗಿದೆ. ಬಸ್ ಸಂಪೂರ್ಣವಾಗಿ ಚಾರ್ಜ್ ಮಾಡಲು 1-1.5 ಗಂಟೆ ಬೇಕಾಗುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಿಂದ 120 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಎಲ್ಲ ಡಿಪೋಗಳಲ್ಲಿ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಈ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲ್, ಎಲ್ಲಾ ದೆಹಲಿ ನಿವಾಸಿಗಳಿಗೆ ಶುಭಾಶಯಗಳು. ದೆಹಲಿಯ ರಸ್ತೆಗಳಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಓಡಾಟ ಆರಂಭಿಸಿದೆ. 300 ಎಲೆಕ್ಟ್ರಿಕ್ ಬಸ್‌ಗಳನ್ನು ಶೀಘ್ರದಲ್ಲೇ ಡಿಟಿಸಿಯ ಫ್ಲೀಟ್‌ಗೆ ಸೇರಿಸಲಾಗುವುದು. ನಿಮ್ಮ ವಾಹನವನ್ನು ಎಲೆಕ್ಟ್ರಿಕ್‌ಗೆ ಬದಲಾಯಿಸುವ ಮೂಲಕ ಮಾಲಿನ್ಯದ ವಿರುದ್ಧದ ಈ ಯುದ್ಧದಲ್ಲಿ ನೀವು ಸಹ ಕೊಡುಗೆ ನೀಡಬೇಕು ಎಂದಿದ್ದಾರೆ.
ಇಷ್ಟು ವರ್ಷದ ಬಳಿಕ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಈಗ ಈ ಕ್ರಮ ಕೈಗೊಂಡಿರುವ ಬಗ್ಗೆ ಕೆಲವು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. 2011ರಿಂದಲೂ ಈ ಎಲೆಕ್ಟ್ರಿಕ್‌ ಬಸ್‌ ಕುರಿತು ಸಾಕಷ್ಟು ಪ್ರಯತ್ನಗಳು ನಡೆಯುತ್ತಲಿದ್ದರೂ ಕೂಡ ಯಾವುದೇ ರೀತಿಯಲ್ಲಿ ಬೆಳವಣಿಗೆ ಕಂಡುಬಂದಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!