Sunday, October 1, 2023

Latest Posts

ಅಕ್ಕಿ, ಸಕ್ಕರೆ, ಈರುಳ್ಳಿ ಹೇರಿಕೊಂಡು ಮಣಿಪುರಕ್ಕೆ ಬಂತು ಮೊದಲ ಗೂಡ್ಸ್ ರೈಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂಸಾಚಾರ ಪೀಡಿತ ಮಣಿಪುರದ (Manipur) ತಮೆಂಗ್ಲಾಂಗ್ ಜಿಲ್ಲೆಯ ಖೊಂಗ್ಸಾಂಗ್ (Khongsang Railway Station)ರೈಲು ನಿಲ್ದಾಣಕ್ಕೆ ಮೊದಲ ಬಾರಿಗೆ ಈಶಾನ್ಯ ಮುಂಚೂಣಿ ರೈಲ್ವೆಯ ಗೂಡ್ಸ್ ರೈಲು ಆಗಮಿಸಿದೆ.
ಮಣಿಪುರಕ್ಕೆ ಆಲೂಗಡ್ಡೆ, ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸಿದೆ.

ಮಣಿಪುರದ ಖೊಂಗ್‌ಸಾಂಗ್ ರೈಲ್ವೆ ನಿಲ್ದಾಣಕ್ಕೆ ತಲುಪಿದಾಗ ಅಲ್ಲಿ ಭವ್ಯ ಸ್ವಾಗತ ಕೋರಲಾಯಿತು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ರಾಜಧಾನಿ ದಿಲ್ಲಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಬಿಜೆಪಿ ವತಿಯಿಂದ ಕಳೆದ ೧೨ದಿನಗಳಿಂದ ಊಟೋಪಚಾರಗಳನ್ನು ನಿರಂತರವಾಗಿ ಒದಗಿಸಲಾಗುತ್ತಿದೆ.೧೪ಕಡೆಗಳಲ್ಲಿ ಬಿಜೆಪಿ ಈ ಬಿಸಿಯೂಟ ಒದಗಿಸುವ ಕ್ರಮ ಕೈಗೊಂಡಿದ್ದು ,ಸಾವಿರಾರು ಮಂದಿ ಈ ನೆರವಿನ ಪ್ರಯೋಜನ ಪಡೆಯುತ್ತಿದ್ದು, ಸಂಕಷ್ಟಪೀಡಿತರ ನೆರವಿಗೆ ಬಿಜೆಪಿ ಕೈಗೊಂಡಿರುವ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕೂಡ ಈ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ‘ಇಂದು ಖೋಂಗ್‌ಸಾಂಗ್ ರೈಲು ನಿಲ್ದಾಣದಲ್ಲಿ ಉದ್ಘಾಟನಾ ಗೂಡ್ಸ್ ರೈಲಿನ ಮಹತ್ವದ ಆಗಮನವನ್ನು ವೀಕ್ಷಿಸಲು ಸಂತೋಷವಾಗಿದೆ. ಈ ಬೆಳವಣಿಗೆಯು ಮಣಿಪುರದ ಜನರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಅದರ ಜತೆಗೆ ಸರಕುಗಳು ಮತ್ತು ಅಗತ್ಯ ವಸ್ತುಗಳ ತ್ವರಿತ ಸಾಗಣೆಯ ಭರವಸೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!