Saturday, March 25, 2023

Latest Posts

ಇಂದಿನಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭ, ಗುಜರಾತ್-ಮುಂಬೈ ನಡುವೆ ಮೊದಲ ಪಂದ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷೆಯ ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗಲಿದೆ.
ಇಡೀ ವಿಶ್ವವೇ ಪಂದ್ಯಕ್ಕಾಗಿ ಕಾಯುತ್ತಿದ್ದು, ಮೊದಲ ಪಂದ್ಯ ಗುಜರಾತ್-ಮುಂಬೈ ತಂಡದ ನಡುವೆ ನಡೆಯಲಿದೆ.

ಒಂದು ಕಪ್‌ಗಾಗಿ ಒಟ್ಟಾರೆ 20 ಪಂದ್ಯಗಳು ನಡೆಯಲಿದ್ದು, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ‍್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ‍್ಸ್ ಹೋರಾಟ ನಡೆಸಲಿವೆ.

Gujarat Giants vs Mumbai Indians: गुजरात मुंबई करेंगे WPL का आगाज, कौन  बनाएगा पहली जीत से इतिहास | Gujarat Giants vs Mumbai Indians Match Preview  Who Will Win GG vs MI WPLಮಹಿಳಾ ಕ್ರಿಕೆಟ್‌ಗೆ ದೊಡ್ಡ ಮಟ್ಟದ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಡಬ್ಲೂಪಿಎಲ್ ಆರಂಭವಾಗುತ್ತಿದ್ದು, ಬೆತ್ ಮೂನಿ ನಾಯಕತ್ವದ ಗುಜರಾತ್ ಹಾಗೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಸೆಣೆಸಾಡಲಿವೆ.

ಎಲ್ಲಾ ಪಂದ್ಯಗಳು ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿವೆ. ಪಂದ್ಯ ಉದ್ಘಾಟನೆಗೂ ಮುನ್ನ ಅದ್ಧೂರಿ ಮನರಂಜನಾ ಕಾರ್ಯಕ್ರಮ ನಡೆಯಲಿವೆ.

WPL 2023 Opening Ceremony: Date, Time, Performers, Celebs, Photos,  Streaming, Ticket, Where & When to Watch - JanBharat Timesಬಾಲಿವುಡ್ ನಟಿಯರಾದ ಕ್ರಿತಿ ಸನೋನ್ ಹಾಗೂ ಕಿಯಾರಾ ಅಡ್ವಾನಿ ಮಲ್ಹೋತ್ರ ಡ್ಯಾನ್ಸ್ ಮಾಡಲಿದ್ದಾರೆ. ಇದಕ್ಕೆ ಪಂಜಾಬಿ ಗಾಯಕ ಎಪಿ ಡಿಲ್ಲೋನ್ ಕೂಡ ಜೊತೆಯಾಗಲಿದ್ದು, ಪ್ರೀಮಿಯರ್ ಲೀಗ್ ಗೀತೆ ಹಾಡಲಿದ್ದಾರೆ. ಸಂಜೆ 7:30ಕ್ಕೆ ಮೊದಲ ಪಂದ್ಯ ಆರಂಭವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!