ಬಿಗ್‌ಬಾಸ್‌ ಒಟಿಟಿ ಶೋ ಮುಗಿದ ಬೆನ್ನಲ್ಲೇ ಬರಲಿದೆ 9 ನೇ ಸೀಸನ್: ರಿಲೀಸ್ ಆಯಿತು ಮೊದಲ ಪ್ರೋಮೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಈಗಾಗಲೇ ಕನ್ನಡ ಬಿಗ ಬಾಸ್ ಒಟಿಟಿ ಶೋ ಉತ್ತಮವಾಗಿ ಮೂಡಿಬರುತ್ತಿದ್ದು, ಅಂತಿಮ ಘಟ್ಟ ತಲುಪಿದೆ. ಇದರ ಬೆನ್ನಲ್ಲೇ ಈಗ ಬಿಗ್ ಬಾಸ್ 9 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂಬಂಧ ಪ್ರೋಮ್ ಬಿಡುಗಡೆಯಾಗಿದೆ.
ಒಟಿಟಿ ಶೋ ಮುಂದಿನ ವಾರ ಮುಗಿಯುತ್ತಿದ್ದು, ಇದರ ಜೊತೆಗೆ ಯಾರೆಲ್ಲ ಒಟಿಟಿಯಿಂದ ಟಿವಿ ಶೋಗೆ ಹೋಗಲಿದ್ದಾರೆ ಎಂಬ ಕುತೂಹಲ ಕೂಡ ಹೆಚ್ಚಿದೆ.
ಆಗಸ್ಟ್‌ 6ರಿಂದ ಬಿಗ್‌ ಬಾಸ್‌ ಒಟಿಟಿ ಆರಂಭವಾಗಿದ್ದು, 6 ವಾರಗಳ ಕಾಲ ಈ ಸ್ಪರ್ಧೆ ನಡೆಯುತ್ತಿದೆ. ಇದೀಗ ಬಿಗ್ ಬಾಸ್ 9 ನೇ ಸೀಸನ್ ಆರಂಭವಾಗಲಿದೆ. ಸದ್ಯ ಒಟಿಟಿ ಶೋ ನಡೆಯುತ್ತಿದ್ದು 24/7 ಲೈವ್ ಅನ್ನು ವೀಕ್ಷಕರು ನೋಡುತ್ತಿದ್ದಾರೆ. ಡಿಜಿಟಲ್ ಎಂಟರ್‌ಟೇನ್ಮೆಂಟ್‌ ಕ್ಷೇತ್ರದಲ್ಲಿ ಬಿಗ್‍ಬಾಸ್ ಒಟಿಟಿ ಹಿಂದಿ ಒಂದು ಗೇಮ್ ಚೇಂಜರ್ ಎಂಬುದನ್ನು ಸಾಬೀತು ಮಾಡಿತ್ತು.

ಈ ವಾರ 5ನೇ ವಾರದ ಒಟಿಟಿ ಶೋ ನಡೆಯುತ್ತಿದ್ದು, ಇವರಲ್ಲಿ ಸೋನು , ಸೋಮಣ್ಣ ಮಾಚಿಮಾಡ, ನಂದಿನಿ, ಆರ್ಯವರ್ಧನ್, ಜಸ್ವಂತ್ ಬೋಪಣ್ಣ ಹಾಗೂ ಜಯಶ್ರೀ ಬೋಪಣ್ಣ ಡೇಂಜರ್ ಝೋನ್‌ನಲ್ಲಿದ್ದು, ಯಾರು ಈ ವಾರ ಮನೆಯಿಂದ ಹೊರಹೋಗುತ್ತಾರೆ ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!