ಲಿಬಿಯಾದಲ್ಲಿ ಮೊದಲ ಉಗ್ರ ದಾಳಿ ನಡೆಸಿದ್ದು ಕೇರಳದ ಯುವಕ: ಐಸಿಸ್ ಮುಖವಾಣಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಲಿಬಿಯಾದಲ್ಲಿ ಐಸಿಸ್ ನಡೆಸಿದ ಮೊದಲ ಮಾರಾಣಾಂತಿಕ ಉಗ್ರ ದಾಳಿಯನ್ನು ನಡೆಸಿದ್ದು ಕೇರಳದ ಯುವಕ ಎಂದು ಐಸಿಸ್ ತನ್ನ ಮುಖವಾಣಿ ವಾಯ್ಸ್ ಆಫ್ ಖುರಾಸನ್‌ನಲ್ಲಿ ಹೇಳಿಕೊಂಡಿದೆ.
ಈ ಮೂಲಕ ಕೇರಳದಿಂದ ಐಸಿಸ್ ಸೇರಿದಂತೆ ಹಲವು ಉಗ್ರಸಂಘಟನೆಗಳಿಗೆ ಯುವಕರು ಸೇರಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳಿಗೆ ಪುಷ್ಟಿ ನೀಡಿದ್ದಂತಾಗಿದೆ.
ಈ ದಾಳಿಯಲ್ಲಿ ಭಾರತೀಯ ಮೂಲದ ಐಸಿಸ್ ಉಗ್ರ ಹತನಾಗಿದ್ದಾನೆ ಎಂದು ಖುರಾಸನ್‌ನಲ್ಲಿ ಹೇಳಿದೆ. ಈತನ ಹೆಸರನ್ನು ಐಸಿಸ್ ಬಹಿರಂಗ ಪಡಿಸಿಲ್ಲ. ಆದರೆ ಈತ ಐಸಿಸ್ ಸಂಘಟನೆಯಲ್ಲಿ ಅಬು ಬಕರ್ ಅಲ್ ಹೈದ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಇಷ್ಟೇ ಅಲ್ಲ ಈತ ಕೇರಳದ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ ಯುವಕ. ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದ. ಐಸಿಸ್‌ನಿಂದ ಪ್ರಭಾವಿತನಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದ. ಬಳಿಕ ಐಸಿಸ್ ಸಂಘಟನೆ ಸೇರಿಕೊಂಡಿದ್ದ. ಈತನೇ ಲಿಬಿಯಾದಲ್ಲಿನ ಮೊದಲ ಭಯೋತ್ಪಾದಕ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಅಬು ಬಕರ್ ಅಲ್ ಹೈದ್ ಮೃತಪಟ್ಟಿದ್ದಾನೆ ಎಂದು ವಾಯ್ಸ್ ಆಫ್ ಖುರಾಸನ್ ಹೇಳಿದೆ.
ವಾಯ್ಸ್ ಆಫ್ ಖುರಾಸನ್ ಎಂಬುವುದು ಆಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸಿಸ್ ಸಂಘಟನೆಯ ಮುಖವಾಣಿ. ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಭಾರತದ ತನಿಖಾ ಸಂಸ್ಥೆ ರಹಸ್ಯ ತನಿಖೆ ಆರಂಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!