ಚೂಪಾದ ಕೊಕ್ಕೆಯಿಂದ ಮೀನುಗಾರನ ಹೊಟ್ಟೆಗೆ ಇರಿದು ಕೊಂದ ಮೀನು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಮ್ಮು ಕೋಣಂ ( Black marlin)  ಮೀನೊಂದು ಮೀನುಗಾರನ ಹೊಟ್ಟೆಗೆ ಇರಿದಿದ್ದು, ಮೀನುಗಾರ ಮೃತಪಟ್ಟಿದ್ದಾನೆ.
ವಿಶಾಖಪಟ್ಟಣಂನಲ್ಲಿ ಘಟನೆ ನಡೆದಿದ್ದು, ಮೀನುಗಾರ ಎನ್. ಜೋಗಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುತ್ಯಾಲಮ್ಮ ಪಾಲೆಂ ಕರಾವಳಿಯ ಆಳ ಸಮುದ್ರದಲ್ಲಿ ಜೋಗಣ್ಣ ಮೀನು ಹಿಡಿಯುತ್ತಿದ್ದರು. ಈ ವೇಳೆ ಬಲೆಗೆ 70 ಕೆ.ಜಿ ತೂಕದ ಕೊಮ್ಮು ಕೋಣಂ ಮೀನು ಸಿಲುಕಿಕೊಂಡಿದೆ. ಈ ದೊಡ್ಡ ಮೀನನ್ನು ದೋಣಿಗೆ ಎಳೆಯಲು ಸಾಧ್ಯವಾಗದೇ ಜೋಗಣ್ಣ ಉಳಿದ ಮೀನುಗಳನ್ನು ದೋಣಿಗೆ ಸಾಗಿಸಲು ಯತ್ನಿಸಿದ್ದಾರೆ. ಈ ವೇಳೆ ಚೂಪಾದ ಕೊಕ್ಕೆಯುಳ್ಳ ಮೀನು ಜೋಗಣ್ಣನ ಹೊಟ್ಟೆಗೆ ಇರಿದಿದೆ. ಮೀನು ಚುಚ್ಚಿದ ರಭಸಕ್ಕೆ ಜೋಗಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!