ಗಾಲ್ವಾನ್ ಘರ್ಷಣೆಯಲ್ಲಿ ಚೀನಾಗೆ ಹೆಚ್ಚು ಹಾನಿ: ಘರ್ಷಣೆಯಲ್ಲಿ ಸತ್ತವರಿಗಿಂತ ನದಿಯಲ್ಲಿ ಕೊಚ್ಚಿ ಹೋದ ಚೀನಾ ಸೈನಿಕರೇ ಹೆಚ್ಚು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗೆ 2020ರಲ್ಲಿ ನಡೆದ ಸಂಘರ್ಷದಲ್ಲಿ ಚೀನಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆಯು, ಅಧಿಕೃತ ಸಾವಿನ ಸಂಖ್ಯೆಗಿಂತಲೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ‘ದಿ ಕ್ಲಾಕ್ಸನ್’ ವರದಿ ಮಾಡಿದೆ. ಅಲ್ಲದೇ ಘರ್ಷಣೆಯಲ್ಲಿ ಮೃತಪಟ್ಟವರಿಗಿಂತಲೂ, ಗಾಲ್ವಾನ್ ನದಿಯನ್ನು ದಾಟುವಾಗ ಕೊಚ್ಚಿ ಹೋದ ಸೈನಿಕರ ಸಂಖ್ಯೆಯೇ ಹೆಚ್ಚು. ಆದರೆ ಈ ಬಗ್ಗೆ ಚೀನಾ ಈವರೆಗೂ ಬಹಿರಂಗವಾಗಿ ಹೇಳಿಕೊಂಡಿಲ್ಲ ಎಂದು ವರದಿ ಹೇಳಿದೆ.

ಸಂಶೋಧಕರು ಮತ್ತು ಚೀನಾದ ಬ್ಲಾಗರ್‌ಗಳ ಸಂಶೋಧನೆ ಆಧರಿಸಿ ಕ್ಲಾಕ್ಸನ್ ವರದಿ ಮಾಡಿದೆ. ಭದ್ರತೆಯ ಕಾರಣದಿಂದ ಮಾಹಿತಿ ನೀಡಿರುವವ ಹೆಸರನ್ನು ಬಹಿರಂಗಪಡಿಸಿಲ್ಲ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

2020 ರ ಜೂನ್ 25  ರಂದು ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷ ನಡೆದಿದ್ದು, ಭಾರತೀಯ ಸೇನೆಯ 20 ಮಂದಿ ಪ್ರಾಣ ಅರ್ಪಿಸಿದ್ದರು. ಸಂಘರ್ಷದಲ್ಲಿ ಐವರು ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಅಧಿಕೃತವಾಗಿ ಒಪ್ಪಿಕೊಂಡಿತ್ತು. ಇದೀಗ ಮೃತಪಟ್ಟವರ ಸಂಖ್ಯೆ ಇದಕ್ಕಿಂತ ಹೆಚ್ಚು ಎನ್ನುವ ಮಾಹಿತಿ ಹೊರಬಿದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!