July 4, 2026
Saturday, July 4, 2026
spot_img

ಫಾರಂ ತುಂಬೋಕೇ ಬರ್ತಿಲ್ಲ, ನಮ್ಮ ಗ್ಯಾರಂಟಿ ಯೋಜನೆ ಕಿತ್ಕೋತೀರಾ? ಎಸ್‌ಐಆರ್‌ ಭಾರೀ ಗೊಂದಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳ ಮನೆ-ಮನೆ ಭೇಟಿ ಐದು ದಿನಗಳನ್ನು ಪೂರ್ಣಗೊಳಿಸಿದರೂ ಎಲ್ಲಾ ರೀತಿಯ ಕನ್ಫ್ಯೂಷನ್ಸ್‌ ಹಾಗೆಯೇ ಉಳಿದುಕೊಂಡಿದೆ. ಅಧಿಕಾರಿಗಳು ನಾಗರಿಕರ ಮನೆಗೆ ತೆರಳಿ ಫಾರಂ ಕೊಟ್ಟು ತುಂಬಿ ಎಂದು ಹೇಳಿ ಹೋದರೂ ಜನರಿಗೆ ಅದನ್ನು ತುಂಬೋಕೆ ಗೊತ್ತಾಗ್ತಿಲ್ಲ.

ಅರ್ಜಿ ನಮೂನೆಗಳು ಕನ್ನಡದಲ್ಲಿರುವ ಕಾರಣ ಅವರಿಗೆ ಅದು ಅರ್ಥವಾಗುತ್ತಿಲ್ಲ. 2002ರಲ್ಲಿ ನಡೆದಿದ್ದ ಹಿಂದಿನ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ವಿವರಗಳನ್ನು ಕೇಳಿರುವ ಕಾಲಮ್‌ಗಳಲ್ಲಿ ಏನು ಭರ್ತಿ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹಲವರು ಹೇಳಿದ್ದಾರೆ.

ಮತ್ತೊಂದು ಆತಂಕಕಾರಿ ವಿಷಯವೆಂದರೆ, ಬಿಎಲ್‌ಒಗಳು ಮತ್ತು ಬೂತ್ ಮಟ್ಟದ ಏಜೆಂಟ್‌ಗಳು ಕೂಡ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಏನು ಭರ್ತಿ ಮಾಡಬೇಕು ಎಂದು ನಾನು ಬಿಎಲ್‌ಒ ಅವರನ್ನು ಕೇಳಿದಾಗ, ಅವರಿಗೆ ಸ್ಪಷ್ಟತೆ ಇಲ್ಲದ ಕಾರಣ ಆ ಕಾಲಮ್ ನ್ನು ಖಾಲಿ ಬಿಡಿ ಎಂದು ಹೇಳಿದರು. ಅಪೂರ್ಣ ಅರ್ಜಿ ಸಲ್ಲಿಸುವುದರಿಂದ ಇಡೀ ಪ್ರಕ್ರಿಯೆಯೇ ವ್ಯರ್ಥವಾಗುತ್ತದೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.

ಅರ್ಜಿಯನ್ನು ಹೇಗೆ ಭರ್ತಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ನಾಗರಿಕರು ಚುನಾವಣಾ ಆಯೋಗ ಪ್ರಕಟಿಸಿರುವ ಆನ್‌ಲೈನ್ ವಿಡಿಯೊಗಳನ್ನು ನೋಡಬೇಕು. ಅರ್ಜಿಗಳನ್ನು ಈಗ ಪಡೆದು ನಂತರ ಸಲ್ಲಿಸಬಹುದು. ಅದಕ್ಕೆ ಒಂದು ತಿಂಗಳ ಕಾಲಾವಕಾಶವಿದೆ. ಹೀಗಾಗಿ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !