ದಿನಭವಿಷ್ಯ | ಅತಿಯಾದ ಖರ್ಚು ನಿಮ್ಮ ಜೇಬು ಬರಿದಾಗಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ವೃತ್ತಿಯಲ್ಲಿ ಯಶಸ್ಸು. ಹಣದ ಹೂಡಿಕೆ ಫಲ ನೀಡುವುದು. ಲಲಿತಕಲೆಯಲ್ಲಿ ಆಸಕ್ತಿ ಮೂಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶ.

ವೃಷಭ
ವೃತ್ತಿಗೆ ಸಂಬಂಧಿಸಿಯೇ ನಿಮ್ಮ ಪೂರ್ಣ ಗಮನ. ಕೆಲವು ಅನಪೇಕ್ಷಿತ ಬೆಳವಣಿಗೆ ಸಂಭವಿಸೀತು. ಇತರರ ಹಸ್ತಕ್ಷೇಪಕ್ಕೆ ಅವಕಾಶ ಕೊಡದಿರಿ.

ಮಿಥುನ
ಅಲ್ಪಾವಧಿ ಗುರಿ ಸಾಧಿಸುವಿರಿ. ಕೆಲಸದ ಒತ್ತಡ ಕಡಿಮೆಯಾಗದು, ಆದರೆ ಇಂದು ನೀವು ಎಲ್ಲಾ ಸವಾಲು ಎದುರಿಸಲು ಸಿದ್ಧರಾಗಿರುವಿರಿ.

ಕಟಕ
ಕೌಟುಂಬಿಕ ಪರಿಸರ ಇಂದು ನಿಮಗೆ ಹೆಚ್ಚು ಆಪ್ತವೆನಿಸುವುದು. ಶುಭ ಸಮಾರಂಭದ ವಾತಾವರಣ. ಆಹಾರ ಸೇವನೆಯ ಮೇಲೆ ನಿಗಾವಿರಲಿ.

ಸಿಂಹ
ಹೊಸ ಯೋಜನೆ ಆರಂಭಿಸಲು ಸಕಾಲ. ಕೆಲವು ಪ್ರತಿಕೂಲ ಬೆಳವಣಿಗೆ ಸಂಭವಿಸೀತು. ಆದರೆ ನಿಮ್ಮ ಸಹನೆ ಕಳಕೊಳ್ಳಬೇಡಿ.

ಕನ್ಯಾ
ಅನವಶ್ಯಕ ವಾದವಿವಾದಕ್ಕೆ ಸಿಲುಕುವಿರಿ. ಅದು ನಿಮಗೆ ಪ್ರತಿಕೂಲ ಆದೀತು. ಹಾಗಾಗಿ ಎಚ್ಚರಿಕೆಯಿಂದ ನಡಕೊಳ್ಳಿ.

ತುಲಾ
ವೃತ್ತಿಗೆ ಸಂಬಂಧಿಸಿದ ಬೆಳವಣಿಗೆಗಳೇ ಇಂದು ನಿಮಗೆ ಆದ್ಯತೆ ಎನಿಸುತ್ತದೆ ಇದರಿಂದಾಗಿ ಕುಟುಂಬ, ಖಾಸಗಿ ಬದುಕು ಕಡೆಗಣನೆಗೆ ಈಡಾಗಬಹುದು.

ವೃಶ್ಚಿಕ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಿನಲ್ಲಿ ಹೆಚ್ಚು ಹೊಣೆಗಾರಿಕೆ ಹೆಗಲೇರುವುದು. ಅನವಶ್ಯ ಖರ್ಚುಗಳಿಗೆ ನಿಯಂತ್ರಣ ಹಾಕಿರಿ. ಬಂಧುಗಳ ಭೇಟಿ.

ಧನು
ನಿಮ್ಮ ಪ್ರತಿಯೊಂದು ಕಾರ್ಯವೂ ಇಂದು ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ. ಈ ದಿನ ಸದುಪಯೋಗ ಪಡಿಸಿ. ಕೌಟುಂಬಿಕ ಕಿರಿಕಿರಿ ಮಾಯವಾಗುವುದು.

ಮಕರ
ಆರ್ಥಿಕ ವಿಚಾರವನ್ನು ಎಚ್ಚರದಿಂದ ನಿಭಾಯಿಸಿ. ಅತಿಯಾದ ಖರ್ಚು ನಿಮ್ಮ ಜೇಬು ಬರಿದಾಗಿಸಬಹುದು. ಮನೆಯಲ್ಲಿ ವಾದ ಸಂಭವಿಸಬಹುದು.

ಕುಂಭ
ಯಾವುದೇ ಕೆಲಸವನ್ನು ಅತಿರೇಕದಿಂದ ನಿರ್ವಹಿಸಬೇಡಿ. ಅದುವೇ ನಿಮ್ಮ ಸಮಸ್ಯೆ ಆಗುವುದು. ಎಲ್ಲರದರಲ್ಲೂ ಮಿತಿಯಿರಲಿ.

ಮೀನ
ಇಂದಿನ ಪ್ರಮುಖ ಕಾರ್ಯವನ್ನು ಮುಂದೂಡಿ. ಏಕೆಂದರೆ ಅದು ಫಲ ನೀಡದೇ ಹೋದೀತು. ಕೌಟುಂಬಿಕ ಅಸಹಕಾರ ಎದುರಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!