Wednesday, September 28, 2022

Latest Posts

ಧನ್‌ಬಾದ್‌ನಲ್ಲಿ ಕ್ವಿಟ್ ಇಡಿಯಾ ಚಳುವಳಿಯ ನಾಯಕತ್ವ ವಹಿಸಿದ್ದರು ಪುರುಷೋತ್ತಮ್ ಚೌಹಾಣ್

ಹೊಸದಿಗಂತ ಡಿಜಿಟಲ್‌ ಡೆಸ್ಕ್ (ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವಿಶೇಷ)
ಪುರುಷೋತ್ತಮ್ ಚೌಹಾಣ್ ಅವರು ಜಾರ್ಖಂಡ್‌ನ ಧನ್‌ಬಾದ್‌ನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಪುರುಷೋತ್ತಮ್ ಚೌಹಾಣ್ ಮೂಲತಃ ಗುಜರಾತ್‌ನ ಕಚ್‌ ಪ್ರದೇಶದವರು. ಅವರು 1905 ರಲ್ಲಿ ಖಮ್ಜಿ ವಾಲ್ಜಿ ಚೌಹಾನ್ ಎಂಬುವವರ ಪುತ್ರನಾಗಿ ಜನಿಸಿದರು.
ಅವರ ತಂದೆ ರೈಲ್ವೆ ಗುತ್ತಿಗೆದಾರರಾಗಿದ್ದರು ಮತ್ತು 1916 ರಲ್ಲಿ ಅವರು ಖಿಲ್ಜಿ ವಾಲ್ಜಿ ಅಂಡ್ ಕಂಪನಿಯನ್ನು ಸ್ಥಾಪಿಸಿದರು. 1930 ರ ದಶಕದಲ್ಲಿ ಪುರೋಷೋತ್ತಮ್ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಕಾನೂನು ಓದುತ್ತಿದ್ದಾಗ ಗಾಂಧೀಜಿಯಿಂದ ಪ್ರಭಾವಿತರಾದರು. ಅವರು 1942 ರಲ್ಲಿ ಧನ್‌ಬಾದ್‌ನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಮುನ್ನಡೆಸಿದರು.
1942 ರ ಚಳವಳಿಯಲ್ಲಿ ಪುರುಷೋತ್ತಮ್ ಚೌಹಾಣ್ ಅವರೊಂದಿಗೆ ಪ್ರಶಾಂತ್ ಚಂದ್ರ ಬೋಸ್ ಮತ್ತು ರಾಮ್ ನಾರಾಯಣ ಶರ್ಮಾ ಅವರಂತಹ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಜೊತೆಯಾಗಿದ್ದರು. ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರು ಅವರು ಸಾಗುತ್ತಿದ್ದ ಮೆರವಣಿಗೆಯ ಮೇಲೆ ಲಾಠಿ ಚಾರ್ಜ್ ಮಾಡಿದರು. ಲಾಠಿ ಚಾರ್ಜ್‌ನಲ್ಲಿ ನೂರಾರು ಜನರು ಗಾಯಗೊಂಡರು ಆದರೆ ದಂಗೆ ಮಾತ್ರ ಕಳೆಗುಂದಲಿಲ್ಲ. ದಂಗೆಯನ್ನು ಹತ್ತಿಕ್ಕಲು ಧನ್ಬಾದ್, ಝರಿಯಾ ಮತ್ತು ಕತ್ರಾಜ್ ಚೌಕ್ನಲ್ಲಿ ಸೈನಿಕರನ್ನು ನಿಲ್ಲಿಸಲಾಯಿತು. ಪುರುಷೋತ್ತಮ್ ಚೌಹಾಣ್ ಆಗ ವಿದ್ಯಾರ್ಥಿ ನಾಯಕರಾಗಿ ಪ್ರಸಿದ್ಧರಾಗಿದ್ದರು. ಜನರನ್ನು ದಂಗೆಗೆ ಪ್ರಚೋದಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ಧನ್‌ಬಾದ್‌ನಲ್ಲಿ ಅವರ ನೇತೃತ್ವದಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯು ಎಷ್ಟು ಆಕ್ರಮಣಕಾರಿಯಾಗಿತ್ತೆಂದರೆ, ದಂಗೆಯನ್ನು ಹತ್ತಿಕ್ಕಲು ಆಗಸ್ಟ್‌ನ ಕೊನೆಯ ವಾರದಲ್ಲಿ ದೊಡ್ಡ ಸೈನ್ಯವನ್ನು ಕಳುಹಿಸಲಾಯಿತು ಮತ್ತು ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಪುರುಷೋತ್ತಮ್ ಚೌಹಾಣ್ ಅವರು ಗಣಿ ಕಾರ್ಮಿಕರ ನಾಯಕರಾಗಿಯೂ ಪ್ರಸಿದ್ಧಿ ಪಡೆದಿದ್ದರು. ಅವರು ಸ್ವಾತಂತ್ರ್ಯದ ಬಳಿಕ ಭಾರತದ ಮೊದಲ ಶಾಸಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!