Saturday, December 9, 2023

Latest Posts

ಕೋಡಿಮಠ ಶ್ರೀಗಳ ಮತ್ತೆ ಭವಿಷ್ಯ: ದೇಶಕ್ಕೆ ಕಾದಿದೆ ಮತ್ತೊಂದು ಗಂಡಾಂತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಬಹುಮತದ ಸರ್ಕಾರ ಬರುತ್ತದೆ, ದೇಶದಲ್ಲಿ ಒಂದು ದೊಡ್ಡ ದುರಂತ ನಡೆಯುತ್ತದೆ ಎಂದು ಹೇಳಿದ್ದ ಕೋಡಿ ಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿ ಭವಿಷ್ಯ ಅಂದು ನಿಜವಾಗಿತ್ತು . ಅವರು ಹೇಳಿದಂತೆ ಕಾಂಗ್ರೆಸ್‌ ಬಹುಮತದ ಸರ್ಕಾರ ಹಾಗೂ ಒಡಿಶಾ ರೈಲು ದುರಂತ ನಡೆದಿತ್ತು.

ಆದರೆ, ಇದೀಗ ಮತ್ತೆ ಭವಿಷ್ಯ ನುಡಿದಿದ್ದು, ಮುಂದಿನ ದಿನಗಳಲ್ಲಿ ದೇಶಕ್ಕೆ ಮತ್ತೊಂದು ಗಂಡಾಂತರ ಕಾದಿದೆ. ಜೊತೆಗೆ, ಜಾಗತಿಕವಾಗಿ ಆಗುವ ಯುದ್ಧದ ಬಾಂಬ್‌ ದಾಳಿಯಿಂದ ನಮ್ಮ ದೇಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಜಾಗತಿಕವಾಗಿ 2 ರಾಷ್ಟ್ರಗಳು ನೀರಿನಲ್ಲಿ ಮುಳುಗಡೆ ಆಗಲಿವೆ ಎಂದು ಕೋಡಿ ಮಠದ ಶ್ರೀ ಭವಿಷ್ಯ ನುಡಿದಿದ್ದಾರೆ.

ಕೋಲಾರ (Kolara) ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ. ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಎಂದು ಎಚ್ಚರಿಸಿದ್ದಾರೆ.

ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು, ಬರಲಿದೆ. ಜಾಗತಿಕ ಯುದ್ಧದಲ್ಲಿ ಎಲ್ಲೋ ನಡೆದ ಬಾಂಬ್ ದಾಳಿಯಿಂದ ಸಾಕಷ್ಟು ನಮಗೆ ಅನಾಹುತ ಸಂಭವಿಸಲಿದೆ. ಇದರಿಂದ ದೇಶದಲ್ಲಿ ಅಲ್ಲೋಲ, ಕಲ್ಲೋಲ ಉಂಟಾಗಲಿದೆ ಎಂದು ಹೇಳಿದರು.

ಮತ್ತೊಂದೆಡೆ, ಗಿಡ, ಮರ, ಬಳಿ ದೈವದ, ಆರಾಧ್ಯದ ಸಂಕೇತ, ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೆ ಸಿಕ್ಕಿದೆ ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ ಹಾಗಾಗಿ ಅವರಿಗೆ ಒಳ್ಳೆಯದಾಗಲಿ‌. ಆದ್ಯಾತ್ಮ ಬಿಟ್ಟು ಹೋದ್ರೆ ಅವರಿಗೆ ದೈವವೆ ಉತ್ತರ ನೀಡಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶುಭ ಸೂಚನೆ ನೀಡಿದ ಕೋಡಿ ಮಠದ ಸ್ವಾಮೀಜಿ ಹೇಳಿದರು.

ಜಾಗತಿಕವಾಗಿ ಈ ವರ್ಷ ತಾಪಮಾನ ತೀವ್ರ ಹೆಚ್ಚಳವಾಗುವ ಮುನ್ಸೂಚನೆಯನ್ನೂ ಕೋಡಿಮಠದ ಶ್ರೀಗಳು ನೀಡಿದ್ದಾರೆ. ಹವಾಮಾನ ವೈಪರೀತ್ಯದಿಂದ ಸಮುದ್ರದ ನೀರಿನ ಮಟ್ಟವು ಹೆಚ್ಚಳವಾಗಿದೆ. ಇದರಿಂದ ಭೂಮಿಯ ಮೇಲೆ ನೀರಿ ಪ್ರಮಾಣ ಏರಿಕೆ ಆಗಲಿದ್ದು, ಸಮುದ್ರ ತೀರದಲ್ಲಿರುವ ಎರಡು 2- 3 ದೇಶಗಳು ನೀರಿನಲ್ಲಿ ಮುಳುಗಡೆ ಆಗಲಿವೆ ಎಂಬ ಭಯಾನಕ ಭವಿಷ್ಯವನ್ನೂ ಶ್ರೀಗಳು ಹೇಳಿದ್ದಾರೆ. ಆದರೆ, ಯಾವ ರಾಷ್ಟ್ರಗಳು, ಯಾವ ದಿಕ್ಕಿನಲ್ಲಿರುವ ರಾಷ್ಟ್ರಗಳು ಮುಳುಗಡೆ ಆಗಲಿವೆ ಎಂಬ ಸುಳಿವನ್ನು ನೀಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!