ಫ್ರೆಂಚ್ ನಲ್ಲಿ ಚೂರಿ ಇರಿತ: 6 ಮಕ್ಕಳಿಗೆ ಗಾಯ,ಮೂವರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫ್ರೆಂಚ್ ಆಲ್ಪ್ಸ್‌ನ (French Alps) ಅನ್ನೆಸಿಯಲ್ಲಿ ಚಾಕು ದಾಳಿಯಲ್ಲಿ (Knife Attack) ೬ ಮಕ್ಕಳು ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.ಗಾಯಗೊಂಡವರಲ್ಲಿ ಕನಿಷ್ಠ ಮೂವರು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಬೆಳಿಗ್ಗೆ 9.45 ರ ಸುಮಾರಿಗೆ, ಪಟ್ಟಣದ ಪ್ರಸಿದ್ಧ ಕೆರೆಯ ಸಮೀಪವಿರುವ ಮಕ್ಕಳ ಆಟದ ಮೈದಾನಕ್ಕೆ ಚಾಕು ಹಿಡಿದ ವ್ಯಕ್ತಿಯೊಬ್ಬರು ಪ್ರವೇಶಿಸಿದ್ದು, ಅಲ್ಲಿ ಆಟವಾಡುತ್ತಿದ್ದ ಸುಮಾರು ಮೂರು ವರ್ಷ ವಯಸ್ಸಿನ ಮಕ್ಕಳ ಗುಂಪಿನ ಮೇಲೆ ದಾಳಿ ಮಾಡಿದರು ಎಂದು ಭದ್ರತಾ ಮೂಲ ಮತ್ತು ಸ್ಥಳೀಯ ಅಧಿಕಾರಿ ಎಎಫ್​​ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಾನು ಗಾಬರಿಗೊಂಡಿದ್ದೇನೆ. ಮಕ್ಕಳ ಮೇಲೆ ದಾಳಿ ಮಾಡುವುದು ಖಂಡನೀಯ. ನಿವಾಸಿಗಳು ಮತ್ತು ಪ್ರವಾಸಿಗರು ಇಷ್ಟಪಡುವ ಶಾಂತಿಯುತವಾದ ಸ್ಥಳದಲ್ಲಿ ಇಂದು ಬೆಳಿಗ್ಗೆ ಏನಾಯಿತು ಎಂಬುದು ಯೋಚಿಸಲಾಗದು. ನಾವು ತತ್ತರಿಸಿದ್ದೇವೆ ಎಂದು ಸಂಸದ ವರ್ಜಿನ್ ಡುಬಿ-ಮುಲ್ಲರ್ ಹೇಳಿದ್ದಾರೆ.

ಪೊಲೀಸರು, ಭಯೋತ್ಪಾದನಾ ವಿರೋಧಿ ತನಿಖಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿತ್ತಿದ್ದಾರೆ. ಭದ್ರತಾ ಪಡೆಗಳ ಕ್ಷಿಪ್ರ ಪ್ರತಿಕ್ರಿಯೆಗೆ ಧನ್ಯವಾದಗಳು. ಶಂಕಿತನನ್ನು ಬಂಧಿಸಲಾಗಿದೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಟ್ವೀಟ್ ಮಾಡಿದ್ದಾರೆ.

32 ವರ್ಷ ವಯಸ್ಸಿನ ದಾಳಿಕೋರ, ಸಿರಿಯನ್ ಗುರುತಿನ ಪತ್ರಗಳನ್ನು ಹೊಂದಿದ್ದು, ನಿರಾಶ್ರಿತ ಎಂದು ಫ್ರಾನ್ಸ್ ಇನ್ಫೋ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!