Thursday, June 1, 2023

Latest Posts

SHOCKING | ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಕ್ಕಿಂನ ರಾಜಧಾನಿ ಗ್ಯಾಂಗ್‌ಟಾಕ್‌ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಲಿಫ್ಟ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದಾನೆ.

ಶಾಲೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದ ಬಾಲಕಿಗೆ ಲಿಫ್ಟ್ ನೀಡುತ್ತೇನೆ ಎಂದು ಕಾರ್‌ನೊಳಗೆ ಹತ್ತಿಸಿಕೊಂಡಿದ್ದಾನೆ. ತದನಂತರ ಪೆಟ್ರೋಲ್ ಬಂಕ್ ಬಳಿ, ಹಣ್ಣು, ಜ್ಯೂಸ್ ಖರೀದಿ ಮಾಡಿ ಕಾರ್‌ನಲ್ಲಿಟ್ಟಿದ್ದಾನೆ. ನಂತರ ಹತ್ತಿರದ ಕಾರ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ.

ಬಾಲಕಿ ಕಾಣೆಯಾದ ಮೂರು ದಿನದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನನ್ನ ಮಗಳನ್ನು ಕೊಂದ ಪಾಪಿಗೆ ಗಲ್ಲು ಶಿಕ್ಷೆಯಾಗಬೇಕು. ಮಗಳು ಸಾಯುವ ಮುನ್ನ ನರಳಾಡಿದ್ದಾಳೆ, ಚಿತ್ರಹಿಂಸೆ ಕೊಟ್ಟು ಅವಳನ್ನು ಕೊಂದಿದ್ದಾನೆ. ಆತನಿಗೂ ಇದೇ ರೀತಿ ಚಿತ್ರಹಿಂಸೆಯ ಶಿಕ್ಷೆ ನೀಡಬೇಕು. ಅವನನ್ನು ನನ್ನ ಕೈಗೆ ಒಪ್ಪಿಸಿ ನಾನೇ ಅವನಿಗೆ ಹಿಂಸೆ ನೀಡುತ್ತೇನೆ ಎಂದು ಬಾಲಕಿ ತಾಯಿ ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!