ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ.
ಕಳೆದ ಬರಿ ಚುನಾವಣೆಯಲ್ಲಿ ನಗರದಲ್ಲಿ ಶೇ. 60ರಷ್ಟು ಮತದಾನ ಮಾತ್ರ ಆಗಿತ್ತು. ಈ ಬಾರಿ ಎಲ್ಲ ಅವಕಾಶಗಳನ್ನು ಬಳಸಿ ಶೇ.100ರಷ್ಟು ಮತದಾನ ಆಗಲಿ ಎಂದು ಚುನಾವಣಾ ಆಯೋಗ ಯೋಚಿಸಿ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದೆ.
ಈ ಅವಕಾಶವನ್ನು ಬಳಸಿಕೊಳ್ಳಲು ಬೆಂಗಳೂರಿನ ಮಂದಿ ನಿರ್ಧರಿಸಿದ್ದು, ಮನೆಯಿಂದಲೇ ಎಂಟು ಸಾವಿರ ಮಂದಿ ಮತದಾನಕ್ಕೆ ತಯಾರಾಗಿದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರು ಮನೆಯಿಂದ ಮತದಾನ ಮಾಡಬಹುದಾಗಿದೆ.
ಬೆಂಗಳೂರಿನಲ್ಲಿ 2.36 ಲಕ್ಷಕ್ಕೂ ಹೆಚ್ಚು ಜನರು 80 ವರ್ಷಕ್ಕಿಂತ ಮೇಲ್ಪಟ್ಟಿದ್ದಾರೆ. ರಾಜ್ಯಾದ್ಯಂತ ಈ ಸಂಖ್ಯೆ 12 ಲಕ್ಷಕ್ಕೂ ಹೆಚ್ಚಿದೆ. 8,730 ಜನರು ಮನೆಯಿಂದ ಮತ ಚಲಾಯಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮನೆಯಿಂದಲೇ ಮತದಾನಕ್ಕೆ ಅರ್ಜಿ ಸಲ್ಲಿಸಲು ಇನ್ನು ನಾಲ್ಕು ದಿನ ಸಮಯವಿದ್ದು, ಈ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.