ಇತಿಹಾಸ ಪುಟ ಸೇರಿದ ಗೋಲ್ಡನ್​ ಟೆಂಪಲ್​ನ ಹಾರ್ಮೋನಿಯಂ ಬಳಕೆ: ಇನ್ಮುಂದೆ ಕೇಳದ ಸದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಂಜಾಬ್​​ನ ಗೋಲ್ಡನ್​ ಟೆಂಪಲ್​ ಖ್ಯಾತಿಯ ಹರ್ಮಂದಿರ್ ಸಾಹಿಬ್ ಒಳಗೆ ಹಾರ್ಮೋನಿಯಂ ಬಳಕೆಯನ್ನು ನಿಷೇಧಿಸಲಾಗಿದೆ. ಈ ಮೂಲಕ 122 ವರ್ಷಗಳ ಬಳಿಕ ಹಾರ್ಮೋನಿಯಂ ಸದ್ದು ನಿಧಾನವಾಗಿ ನಿಲ್ಲಲಿದೆ.

ಗೋಲ್ಡನ್​ ಟೆಂಪಲ್​ನಲ್ಲಿ​ ಹಾರ್ಮೋನಿಯಂ ಬಳಕೆ ನಿಲ್ಲಿಸುವಂತೆ ಅಕಾಲ್ ತಖ್ತ್​ನ ಮುಖ್ಯಸ್ಥ ಹರ್‌ಪ್ರೀತ್ ಸಿಂಗ್ ಆದೇಶಿಸಿದ್ದಾರೆ. ಈ ಆದೇಶವನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು ಜಾರಿಗೊಳಿಸಲು ನಿರ್ಧರಿಸಿದೆ.

ಹಾರ್ಮೋನಿಯಂ ಗುರು ಸಾಹಿಬ್‌ಗಳು ಬಳಸುವ ವಾದ್ಯವಲ್ಲ.ಇದು ಭಾರತೀಯರಿಗೆ ಬ್ರಿಟಿಷರು ಒದಗಿಸಿದ ವಾದ್ಯ. ಇದನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಭಾರತಕ್ಕೆ ತರಲಾಯಿತು ಎಂದು ಹರ್‌ಪ್ರೀತ್ ಸಿಂಗ್ ಆದೇಶದಲ್ಲಿ ತಿಳಿಸಿದ್ದಾರೆ.

ಗೋಲ್ಡನ್​ ಟೆಂಪಲ್​ನಲ್ಲಿ​ ಹಾರ್ಮೋನಿಯಂ ಬಳಕೆಯನ್ನು ಏಕಾಏಕಿ ನಿಲ್ಲಿಸುವುದಿಲ್ಲ. ಕ್ರಮೇಣವಾಗಿ ಅವರ ಬಳಕೆ ನಿಲ್ಲಿಸಲಾಗುತ್ತದೆ. ಇದರಿಂದ ಗೋಲ್ಡನ್ ಟೆಂಪಲ್​ಗೆ ಬರುವ ಭಕ್ತರಿಗೂ ಪರಿಪಾಠವಾಗಲಿದೆ. ಇನ್ಮುಂದೆ ಹೆಚ್ಚಾಗಿ ಕೀರ್ತನಾ ಸಮಯದಲ್ಲಿ ಹಾರ್ಮೋನಿಯಂ ಸ್ಥಾನದಲ್ಲಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಲಾಗುವುದು ಎಂದು ತಿಳಿಸಲಾಗಿದೆ.

ಗೋಲ್ಡನ್​ ಟೆಂಪಲ್​ನಲ್ಲಿ​ ಹಾರ್ಮೋನಿಯಂ ಬಳಕೆಗೆ ಸುಮಾರು 112 ವರ್ಷಗಳ ಇತಿಹಾಸ ಇದೆ. 1901ರಲ್ಲಿ ಮೊಟ್ಟಮೊದಲ ಬಾರಿಗೆ ಇದನ್ನು ಬಳಸಲಾಗಿತ್ತು ಎಂಬ ನಂಬಿಕೆ ಇದೆ. ಇದೀಗ 122 ವರ್ಷಗಳ ನಂತರ ಹಾರ್ಮೋನಿಯಂ ಬಳಕೆಗೆ ನಿಷೇಧ ಹೇರಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!