Friday, March 24, 2023

Latest Posts

ಕ್ರಿಪ್ಟೋಕರೆನ್ಸಿಗಳ ಮೇಲೂ ಅಕ್ರಮ ಹಣವರ್ಗಾವಣೆ ನಿಬಂಧನೆ ವಿಧಿಸಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡಿಜಿಟಲ್‌ ಕರೆನ್ಸಿಗಳೆಂದು ಬಿಂಬಿತವಾಗಿಬಿಟ್ಟಿರುವ ಕ್ರಿಪ್ಟೋ ಕರೆನ್ಸಿಗಳ ಮೇಲೆ ಇದೀಗ ಸರ್ಕಾರವು ಅಕ್ರಮ ಹಣವರ್ಗಾವಣೆ (Money Laundering) ನಿಬಂಧನೆಗಳನ್ನು ವಿಧಿಸಿದೆ. ಪ್ರಪಂಚದಾದ್ಯಂತ ಕ್ರಿಪ್ಟೋ ಕರೆನ್ಸಿಗಳು ಅನೇಕ ಆರ್ಥಿಕ ಅಪರಾಧಗಳಿಗೆ ಕಾರಣವಾಗುತ್ತಿರುವದರಿಂದ ದೇಶದಲ್ಲಿ ಕ್ರಿಪ್ಟೋಗಳನ್ನು ಕಾನೂನಿನ ಮೇಲ್ವಿಚಾರಣೆಗೆ ಒಳಪಡಿಸಲು ಸರ್ಕಾರ ಚಿಂತಿಸಿದ್ದು ಇದರ ಭಾಗವಾಗಿ ಭಾರತ ಸರ್ಕರವು ಈ ಕ್ರಮ ಕೈಗೊಂಡಿದೆ.

ಇತ್ತೀಚೆಗಷ್ಟೇ ವಿಶ್ವಬ್ಯಾಂಕ್‌ ಕ್ರಿಪ್ಟೋ ಕರೆನ್ಸಿಗಳ ಕುರಿತಾಗಿ ಕ್ರಿಯಾತ್ಮಕ ಸಲಹೆಗಳನ್ನು ಹೊರತಂದು ಅವುಗಳಿಗೆ ಶಾಸನ ಬದ್ಧ ಮಾನ್ಯತೆ ನೀಡಂತೆ ಸಲಹೆ ನೀಡಿತ್ತು. ಇದೀಗ ಇದರ ವಿರುದ್ಧ ಕಾನೂನು ಚೌಕಟ್ಟು ರೂಪಿಸಲು ಸರ್ಕಾರ ಮುಂದಾಗಿದೆ. ಕ್ರಿಪ್ಟೋ ಟ್ರೇಡಿಂಗ್, ಸೇಫ್ ಕೀಪಿಂಗ್ ಮತ್ತು ಸಂಬಂಧಿತ ಹಣಕಾಸು ಸೇವೆಗಳಿಗೆ ಮನಿ ಲಾಂಡರಿಂಗ್ ವಿರೋಧಿ ಕಾನೂನನ್ನು ಅನ್ವಯಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರದ ಸೂಚನೆಯಲ್ಲಿ ತಿಳಿಸಿದೆ.

“ಬ್ಯಾಂಕ್‌ಗಳು ಅಥವಾ ಸ್ಟಾಕ್ ಬ್ರೋಕರ್‌ಗಳಂತಹ ಇತರ ನಿಯಂತ್ರಿತ ಘಟಕಗಳು ಅನುಸರಿಸುತ್ತಿರುವಂತೆಯೇ ಕ್ರಿಪ್ಟೋಕರೆನ್ಸಿಗಳೂ ಕಾನೂನು ಮಾನದಂಡವನ್ನು ಅನುಸರಿಸಲು ಮನಿ ಲಾಂಡರಿಂಗ್ ವಿರೋಧಿ ನಿಯಮಗಳನ್ನು ಅನ್ವಯಿಸಲಾಗುತ್ತಿದೆ” ಎಂದು ಮಾರುಕಟ್ಟೆಯ ಪಾಲುದಾರರು ಅಭಿಪ್ರಾಯಪಟ್ಟಿದ್ದಾರೆ. . ಕಳೆದ ವರ್ಷವೂ ಭಾರತವು ಕ್ರಿಪ್ಟೋಕರೆನ್ಸಿಗಳಿಗೆ ಕಡಿವಾಣ ಹಾಕಲು ಅನೇಕ ಕ್ರಮ ಕೈಗೊಂಡಿತ್ತು. ಹೆಚ್ಚು ಕಠಿಣ ತೆರಿಗೆಯನ್ನು ಜಾರಿಗೆ ತರಲಾಗಿತ್ತು. ಈಗ ಅಕ್ರಮ ಹಣವರ್ಗಾವಣೆ ನಿಯಮಗಳನ್ನೂ ವಿಸ್ತರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!