Sunday, March 26, 2023

Latest Posts

ಯುಕೆಗೆ ಅಕ್ರಮವಾಗಿ ಬರುವವರಿಗೆ ಇಲ್ಲಿ ನೆಲೆಸಲು ಅವಕಾಶವಿಲ್ಲ : ರಿಷಿ ಸುನಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಆಶ್ರಯ ಅರಸಿ ಚಿಕ್ಕ ಚಿಕ್ಕ ದೋಣಿಗಳಲ್ಲಿ ಅಕ್ರಮವಾಗಿ ಬ್ರಿಟನ್‍ಗೆ ಬಂದು ನೆಲೆಸುವವರಿಗೆ ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ರಿಷಿ ಸುನಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಮೂಲಕ ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ನೂತನ ಕಾನೂನು ಜಾರಿಗೆ ಬ್ರಿಟನ್‌ ಮುಂದಾಗಿದೆ. ಈ ಬಗ್ಗೆ ಪ್ರಧಾನಿ ರಿಷಿ ಸುನಕ್‌ ಮತ್ತು ಗೃಹ ಸಚಿವೆ ಸುವೆಲ್ಲಾ ಬ್ರಾವರ್‌ಮೆನ್‌ ಚರ್ಚೆ ನಡೆಸಿದ್ದಾರೆ.

“ನೀವು ಇಲ್ಲಿಗೆ ಕಾನೂನುಬಾಹಿರವಾಗಿ ಬಂದಿದ್ದರೆ, ರಾಜಾಶ್ರಯ ಪಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಧುನಿಕ ಗುಲಾಮಗಿರಿಯ ರಕ್ಷಣೆಯ ಪ್ರಯೋಜನ ಪಡೆದುಕೊಳ್ಳಲಾಗದು. ನೀವು ನಕಲಿ ಮಾನವ ಹಕ್ಕುಗಳ ಪ್ರತಿಪಾದನೆ ಮಾಡಲು ಸಾಧ್ಯವಿಲ್ಲ ಮತ್ತು ಇಲ್ಲಿ ಉಳಿದುಕೊಳ್ಳುವುದೂ ಸಾಧ್ಯವಿಲ್ಲ” ಎಂದು ರಿಷಿ ಸುನಕ್ ಅವರು ಅಕ್ರಮ ವಲಸಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

“ನಾವು ಇಲ್ಲಿ ಅಕ್ರಮವಾಗಿ ವಾಸವಾಗಿರುವವರನ್ನು ಬಂಧಿಸಲಿದ್ದೇವೆ ಮತ್ತು ಕೆಲವೇ ವಾರಗಳಲ್ಲಿ ಅವರನ್ನು ಹೊರ ಹಾಕಲಿದ್ದೇವೆ. ನಿಮ್ಮ ಸ್ವಂತ ದೇಶ ನಿಮಗೆ ಸುರಕ್ಷಿತವಾಗಿದ್ದರೆ ಅಲ್ಲಿಗೆ ರವಾನಿಸುತ್ತೇವೆ, ಇಲ್ಲವೇ ರವಾಂಡದಂತಹ ಮೂರನೇ ಸುರಕ್ಷಿತ ದೇಶಕ್ಕೆ ಗಡಿಪಾರು ಮಾಡುತ್ತೇವೆ. ಒಮ್ಮೆ ನಿಮ್ಮನ್ನು ಹೊರ ಹಾಕಿದರೆ, ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಮಾಡುವಂತೆಯೇ, ನಮ್ಮ ದೇಶಕ್ಕೆ ಪ್ರವೇಶಿಸುವುದರಿಂದ ಸಂಪೂರ್ಣ ನಿಷೇಧ ವಿಧಿಸಲಾಗುತ್ತದೆ” ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!