ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಸಾಯುವ 30 ನಿಮಿಷಗಳ ಮೊದಲು ಮತದಾನ ಮಾಡುವ ಮೂಲಕ 105 ವಯಸ್ಸಿನ ಅಜ್ಜ ತನ್ನ ಕರ್ತವ್ಯವನ್ನು ಪೂರೈಸಿದ್ದಾರೆ.
ಹೌದು, ಜಾರ್ಖಂಡ್ ಹಜಾರಿಬಾಗ್ ಪಂಚಾಯತ್‌ನ ಬೆಲಾಹಿಯ ಪರ್ತಪುರ ಗ್ರಾಮದ ನಿವಾಸಿ ವರುಣ್ ಸಾಹು (105) ಎನ್ನುವ ವೃದ್ಧ ತಾನು ಸಾಯುವ 30 ನಿಮಿಷಗಳ ಮೊದಲು ಮತದಾನ ಮಾಡುವ ಮೂಲಕ ಜಗತ್ತಿಗೆ ವಿದಾಯ ಹೇಳಿದರು.
ಮತದಾನದ ಅರ್ಧ ಗಂಟೆಯ ನಂತ್ರ ಮನೆಯಲ್ಲಿ ಸಾಯುವುದು ವರುಣ್ ಸಾಹು ಅವರ ಜೀವನದ ಕೊನೆಯ ಆಸೆ. ಅದ್ರಂತೆ, ಒಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ ಪೂರೈಸಿದ ವರುಣ್ ಸಾಹು, ಮೊದಲು ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಿದರು.
105 ವರ್ಷದ ವರುಣ್ ಸಾಹು ಅವ್ರು ಬೆಲಾಹಿ ಪಂಚಾಯತ್‌ನ ಬೂತ್ ಸಂಖ್ಯೆ 256 ರಲ್ಲಿ ಮತ ಚಲಾಯಿಸಿದರು. ಮನೆಗೆ ಹಿಂದಿರುಗಿದ ನಂತ್ರ ಮಧ್ಯಾಹ್ನ 3:20ಕ್ಕೆ ಕೊನೆಯುಸಿರೆಳೆದರು.
ಸಾಯುವ ಮುನ್ನ ಏನು ಅಂದಿದ್ರು: ‘ಈ ವಯಸ್ಸಿನಲ್ಲಿಯೂ ನಾನು ಪ್ರಜಾಪ್ರಭುತ್ವದಲ್ಲಿ ನನ್ನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿದ್ದು ನನ್ನ ಅದೃಷ್ಟ’ ಎಂದು ಹೇಳಿದ್ದರು.
ವರುಣ್ ಸಾಹು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಆದರೆ ಅವರ ಕೊನೆಯ ಆಸೆ ಈಡೇರಿದಾಗ ಅವರು ನಿಧನರಾದರು. ವರುಣ್ ಶನಿವಾರ ಬೆಳಿಗ್ಗೆಯಿಂದ ಮತದಾನಕ್ಕೆ ಹೋಗಬೇಕೆಂದು ಒತ್ತಾಯಿಸುತ್ತಿದ್ದರು. ಆ ಸಮಯದಲ್ಲಿ ಇಬ್ಬರೂ ಹುಡುಗರು ಅವನೊಂದಿಗೆ ಇದ್ದರು. ಮಧ್ಯಾಹ್ನ ೨.೪೫ ಕ್ಕೆ ವರುಣ್ ಅವರನ್ನು ಮತಗಟ್ಟೆಗೆ ಕರೆದೊಯ್ಯಲಾಯಿತು. ಈ ಬಾರಿ ಅವರು ಕಾರಿನಲ್ಲಿ ಕುಳಿತು ಮತ ಚಲಾಯಿಸಿದರು. ಅದರ ನಂತರ ಅವರು ಮನೆಗೆ ಮರಳಿದರು ಮತ್ತು ಅರ್ಧ ಗಂಟೆಯಲ್ಲಿ ಅವರು ಜಗತ್ತಿಗೆ ವಿದಾಯ ಹೇಳಿದರು.