ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ತೆರೆಕಂಡಿದ್ದ ಮಲಯಾಳಂ ಚಿತ್ರ “ದಿ ಗ್ರೇಟ್ ಇಂಡಿಯನ್ ಕಿಚನ್ʼ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭಾರೀ ಮೆಚ್ಚುಗೆ ಗಳಿಸಿತ್ತು. ಜೋ ಬೇಬಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಕುಟಂಬ ಮೌಲ್ಯ, ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಸಲಾಗುವ ಶೋಷಣೆ ಬಗ್ಗೆ ಈ ಚಿತ್ರದಲ್ಲಿ ಸೂಕ್ಷ್ಮವಾದ ಕಥೆಯಿದೆ. ಸೂರಜ್ ವೆಂಜರಮೂಡು ಮತ್ತು ನಿಮಿಷಾ ಸಜಯನ್ ಪ್ರಮುಖ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರ ಮಲೆಯಾಳಂನಲ್ಲಿ ಭರ್ಜರಿ ಹಿಟ್ ದಾಖಲಿಸಿತ್ತು. ಇದೀಗ ಈ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿರುವ ಸುದ್ದಿ ಹೊರಬಿದ್ದಿದ್ದು, ಆರತಿ ಕಡವ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಹರ್ಮನ್ ಬವೇಜಾ ಮತ್ತು ವಿಕ್ಕಿ ಬಹ್ರಿ ಅವರು ಬಂಡವಾಳ ಹೂಡಲಿದ್ದಾರೆ.
ಮಳೆಯಾಳಂ ನಲ್ಲಿ ನಿಮಿಷಾ ಸಜಯನ್ ಕಾಣಸಿಕೊಂಡಿದ್ದ ಮುಖ್ಯ ಪಾತ್ರದಲ್ಲಿ ನಟಿ ಸನ್ಯಾ ಮಲ್ಹೋತ್ರಾ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ, ಮೂಲದಲ್ಲಿ ಸೂರಜ್ ವೆಂಜರಮೂಡು ಅವರು ನಟಿಸಿದ ಪಾತ್ರವನ್ನು ಹಿಂದಿಯಲ್ಲಿ ನಿರ್ವಹಿಸಲು ಖ್ಯಾತ ನಟ ಅಂಗದ್ ಬೇಡಿಗೆ ಆಫರ್ ಮಾಡಲಾಗಿದೆ. ಚಿತ್ರದ ಕಥೆಗೆ ಅಂಗದ್ ಬೇಡಿ ಅತ್ಯುತ್ತಮವಾಗಿ ಹೊಂದಾಣಿಯಾಗುತ್ತಾರೆ ಎಂದು ನಿರ್ದೇಶಕಿ ಆರತಿ ಕಡವ್ ಅವರು ನಿರ್ಮಾಪಕರ ಮನವೊಲಿಸಿದ್ದಾರೆ. ಚಿತ್ರಕಥೆ ಸಂಬಂಧ ಅಂಗದ್ ಅವರೊಂದಿಗೆ ಚಿತ್ರತಂಡ ಈಗಾಗಲೇ ಒಂದುಸುತ್ತಿನ ಮಾತುಕತೆ ನಡೆದ್ದು, ಅಂಗದ್ ಸಹ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಂಗದ್ ಬೇಡಿ ಮತ್ತು ಸನ್ಯಾ ಮಲ್ಹೋತ್ರಾ ಅವರು ಪರದೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಸನ್ಯಾ ಮಲ್ಹೋತ್ರಾ ಥ್ರಿಲ್ಲರ್ ಚಿತ್ರ ಲವ್ ಹಾಸ್ಟೆಲ್ ನಲ್ಲಿ ಬಾಬಿ ಡಿಯೋಲ್ ಮತ್ತು ವಿಕ್ರಾಂತ್ ಮಾಸ್ಸೆ ಜೊತೆಗೆ ನಟಿಸುತ್ತಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಿಚನ್ ಚಿತ್ರದ ಜೊತೆಗೆ ರಾಜ್‌ಕುಮಾರ್ ರಾವ್ ಜೊತೆಗೆ ಹಿಟ್: ದಿ ಫಸ್ಟ್ ಕೇಸ್, ವಿಕ್ಕಿ ಕೌಶಲ್-ನಟನೆಯ ಸ್ಯಾಮ್ ಬಹದ್ದೂರ್ ಮತ್ತು ನೆಟ್‌ಫ್ಲಿಕ್ಸ್ ಚಲನಚಿತ್ರ ಕಥಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಅಂಗದ್ ಜಾಹ್ನವಿ ಕಪೂರ್ ಜೊತೆಗೆ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ನಲ್ಲಿ ಅಭಿನಯಿಸಿದ್ದಾರೆ.