1.43 ಲಕ್ಷ ಕೋಟಿಗಳಷ್ಟಿದೆ ಆಗಸ್ಟ್‌ ತಿಂಗಳ ಜಿಎಸ್‌ಟಿ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಈ ವರ್ಷದ ಆಗಸ್ಟ್‌ ತಿಂಗಳ ಒಟ್ಟೂ ಜಿಎಸ್‌ಟಿ ಆದಾಯವು 1,43,612 ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.28 ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಸತತವಾಗಿ ಆರನೇ ತಿಂಗಳು ಜಿಎಸ್‌ಟಿ ಸಂಗ್ರಹವು 1.4 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ.

ಆಗಸ್ಟ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,43,612 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 24,710 ಕೋಟಿ ರೂ., ಎಸ್‌ಜಿಎಸ್‌ಟಿ ರೂ.30,951 ಕೋಟಿ, ಐಜಿಎಸ್‌ಟಿ ರೂ.77,782 ಕೋಟಿ ಹಾಗೂ ಸರಕುಗಳ ಆಮದಿನ ಮೇಲೆ ಸಂಗ್ರಹವಾದ ರೂ.42,067 ಕೋಟಿ, ಮತ್ತು ಸೆಸ್ ರೂ.10,168 ಕೋಟಿ ರೂ.ಗಳು ಸೇರಿಕೊಂಡಿವೆ.

ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 29,524 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ 25,119 ಕೋಟಿ ರೂಪಾಯಿ ಇತ್ಯರ್ಥಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ. ನಿಯಮಿತ ಇತ್ಯರ್ಥದ ನಂತರ, ಕೇಂದ್ರದ ಒಟ್ಟು ಆದಾಯವು 54,234 ಕೋಟಿ ರೂ.ಗಳಷ್ಟಿದೆ ಮತ್ತು ರಾಜ್ಯಗಳಿಗೆ 56,070 ಕೋಟಿ ರೂ. ಆದಾಯ ದೊರಕಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ, ಜಿಎಸ್‌ಟಿ ಆದಾಯವು 1,12,020 ಕೋಟಿ ರೂ.ಗಳಷ್ಟಿತ್ತು, ಇದು ಈ ವರ್ಷದ ಆಗಸ್ಟ್‌ ಗೆ ಹೋಲಿಕೆ ಮಾಡಿದರೆ ಒಟ್ಟೂ 28 ಶೇಕಡಾದಷ್ಟು ಏರಿಕೆಯಾಗಿದೆ. ಅಲ್ಲದ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕುಗಳ ಆಮದು ಆದಾಯವು ಶೇಕಡಾ 57 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು 19 ಶೇಕಡಾ ಹೆಚ್ಚಾಗಿದೆ ಎಂದು ಮೂಲಗಳ ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!