Friday, June 9, 2023

Latest Posts

HAPPINESS REPORT | ವಿಶ್ವದ ‘ಹ್ಯಾಪಿಯೆಸ್ಟ್’ ದೇಶ ಫಿನ್ಲೆಂಡ್, ಭಾರತದ ಸ್ಥಾನ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಸಂಸ್ಥೆಯ ವಾರ್ಷಿಕ ವಿಶ್ವ ಸಂತೋಷದ ವರದಿ ಬಿಡುಗಡೆಯಾಗಿದ್ದು, ಸತತ ಆರನೇ ಬಾರಿ ಫಿನ್ಲೆಂಡ್ ಮೊದಲನೇ ಸ್ಥಾನ ಗಳಿಸಿದೆ.

ಜಗತ್ತು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂತೋಷದ ಬಗ್ಗೆ ಆಲೋಚನೆಗಳು ಕಡಿಮೆಯಾಗಿವೆ. ಜನರನ್ನು ಸಂತೋಷಪಡಿಸಲು ಹಾಗೂ ಯೋಗಕ್ಷೇಮವನ್ನು ಸುಧಾರಿಸಲು ನೀತಿಗಳನ್ನು ರೂಪಿಸಲು ವಿಶ್ವಸಂಸ್ಥೆ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌ನ್ನು ತಯಾರಿಸಿದೆ.

ಈ ಪಟ್ಟಿಯನ್ನು ಆರೋಗ್ಯಕರ ಜೀವಿತಾವಧಿ, ತಲಾವಾರು ಜಿಡಿಪಿ, ಸಾಮಾಜಿಕ ಬೆಂಬಲ, ಕಡಿಮೆ ಭ್ರಷ್ಟಾಚಾರ, ಸಮುದಾಯಗಳಲ್ಲಿ ಉದಾರತೆ ಇನ್ನಿತರ ಮಾನದಂಡಗಳನ್ನು ಅನುಸರಿಸಿ ತಯಾರಿಸಲಾಗಿದೆ. ವಿಶ್ವದ ಸಂತೋಷಕರ ದೇಶದ ಪಟ್ಟಿಯಲ್ಲಿ ಭಾರತ 162ನೇ ಸ್ಥಾನದಲ್ಲಿದೆ.

ಫಿನ್ಲೆಂಡ್, ಡೆನ್ಮಾರ್ಕ್, ಐಸ್‌ಲ್ಯಾಂಡ್, ಇಸ್ರೇಲ್, ನೆದರ್‌ಲೆಂಡ್, ಸ್ವೀಡನ್, ನಾರ್ವೆ, ಸ್ವಿಟ್ಜರ್ಲೆಂಡ್, ಲಕ್ಸೆಂಬರ್ಗ್ ಹಾಗೂ ನ್ಯೂಜಿಲೆಂಡ್ ಮೊದಲ 10 ಸ್ಥಾನವನ್ನು ಪಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!