ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದಿಂದ ಮಕ್ಕಳಿಗಾಗಿ ನೀಡಲಾಗುವ ಹಾಲಿನ ಪುಡಿಯನ್ನು ಮುಖ್ಯ ಶಿಕ್ಷಕರೊಬ್ಬರು ಕದ್ದು ಮನೆಗೆ ತೆಗೆದುಕೊಂಡು ಹೋಗುವ ವೇಳೆ ಸಿಕ್ಕಿಬಿದ್ದಿದ್ದಾರೆ.
ಎಚ್.ಡಿ ಕೋಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಈ ನೀಚ ಕೃತ್ಯವೆಸಗಿದ್ದಾನೆ. ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಸರ್ಕಾರ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಈ ಹಾಲಿನ ಪೌಡರ್ ನೀಡಲಾಗುತ್ತದೆ. ಆದರೆ ಬಿಇಒ ಕಚೇರಿ ಹತ್ತಿರದಲ್ಲೇ ಇದ್ದರೂ ಶಾಲಾ ಮುಖ್ಯ ಶಿಕ್ಷಕ ಹಾಲಿನ ಪೌಡರ್ ಕದ್ದಿದ್ದಾನೆ. 1 ಕೆ.ಜಿ ತೂಕದ 10 ಪ್ಯಾಕೆಟ್ ಗಳ ಕದ್ದೊಯ್ಯುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ.
ಮುಖ್ಯ ಶಿಕ್ಷಕನನ್ನು ಹಿಡಿದು ಬಿಇಒಗೆ ಸರ್ವಜನಿಕರು ಮಾಹಿತಿ ನೀಡಿದರೂ ಸಮಯಕ್ಕನಿಹುಣವಾಗಿ ಅಧಿಕಾರಿಗಳು ಬಂದಿಲ್ಲ. ಪಟ್ಟಣದಲ್ಲೇ ಈ ಪರಿಸ್ಥಿತಿ ಆದರೆ, ಗ್ರಾಮೀಣ ಭಾಗದ ಶಾಲೆಗಳ ಗತಿ ಏನು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ತಡವಾಗಿ ಬಿಆರ್ಸಿ ಕೃಷ್ಣಯ್ಯ ಸ್ಥಳಕ್ಕಾಗಮಿಸಿದ್ದಾರೆ. ಕೃತ್ಯವೆಸಗಿದ ಶಿಕ್ಷಕನ ಮೇಲೆ ಶಿಸ್ತು ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಎಲ್ಲಾ ಕಡೆ ಇದೆ ಪರಿಸ್ಥಿತಿ ಇದೆ. ಬೆಳಕಿಗೆ ಬಂದಿಲ್ಲ. ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಬಲ್ಲೆ