ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಜನರು ಹೊಗಳು, ಇಷ್ಟು ಜ್ಞಾನ ಹಾಗೂ ಸಿಂಪ್ಲಿಸಿಟಿ ಎಲ್ಲರಿಗೂ ಇರಲಿ ಎಂದು ಹೇಳುವ ಸುಧಾಮೂರ್ತಿ ಅವರೇ ಈ ಬಾರಿ ಟ್ರೋಲ್ ಆಗಿದ್ದಾರೆ.
ಇನ್ಫೋಸಿಸ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಇದೇ ಮೊದಲ ಬಾರಿಗೆ ಟ್ರೋಲ್ ಆಗಿದ್ದಾರೆ. ರಕ್ಷಾ ಬಂಧನ ದಿನಾಚರಣೆಗೆ ಸಂದೇಶ ಕೋರಿದ ಟ್ವೀಟ್ ಇದೀಗ ಟ್ರೋಲ್ ಹಾಗೂ ಆಕ್ರೋಶಕ್ಕೆ ಗುರಿಯಾಗಿದೆ. ರಕ್ಷಾ ಬಂಧನ ಹಬ್ಬವನ್ನು ಮೊಘಲ್ ದೊರೆ ಹುಮಾಯುನ್ ಗೆ ಸಂಬಂಧಿಸಿದ ಘಟನೆಯೊಂದನ್ನು ಉಲ್ಲೇಖಿಸಿದ್ದಾರೆ.
16ನೇ ಶತಮಾನದಲ್ಲಿ ರಾಣಿ ಕರ್ಣವತಿ ಸಮಸ್ಯೆಯಲ್ಲಿ ಸಿಲುಕಿದ್ದಳು. ಸಾಮ್ರಾಜ್ಯದ ಮೇಲೆ ದಾಳಿಯಾಗಿತ್ತು. ಈ ವೇಳೆ ಕರ್ಣವತಿ ರಾಖಿಯೊಂದನ್ನು ಮೊಘಲ್ ದೊರೆ ಹುಮಾಯುನ್‌ಗೆ ಕಳುಹಿಸಿಕೊಟ್ಟು ಸಹೋದರನಾಗಿ ನನ್ನ ರಕ್ಷಣೆ ಮಾಡುವಂತೆ ಕೋರಿದ್ದಳು. ಹುಮಾಯೂನ್‌ಗೆ ಇದು ಏನೆಂದು ತಿಳಿಯಲಿಲ್ಲ. ಏನೆಂದು ವಿಚಾರಿಸಿದಾಗ, ಸ್ಥಳೀಯರು ‘ಇದು ಸಹೋದರನಿಗೆ ಸಹೋದರಿಯ ಕರೆ’ ಎಂದು ಹೇಳಿದರು.
ಇದು ಭೂಮಿಯ ಸಂಪ್ರದಾಯವಾಗಿದೆ ಎಂದರು. ಚಕ್ರವರ್ತಿ, ನಾನು ರಾಣಿ ಕರ್ಣವತಿಗೆ ಸಹಾಯ ಮಾಡುತ್ತೇನೆ ಎಂದು ದೆಹಲಿಯಿಂದ ಹೊರಟರು. ಆದರೆ ಸಮಯಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಕರ್ಣವತಿ ನಿಧನರಾಗಿದ್ದರು. ನೀವು ತೊಂದರೆಯಲ್ಲಿದ್ದಾಗ, ಯಾರಾದರೂ ಬಂದು ನನಗೆ ಸಹಾಯ ಮಾಡಬೇಕು ಎಂಬ ಅರ್ಥವನ್ನು ಆ ದಾರ ಸೂಚಿಸುತ್ತದೆ. ಇದು ಬಹಳಷ್ಟು ಅರ್ಥಪೂರ್ಣವಾಗಿದೆ ಎಂದು ಸುಧಾಮೂರ್ತಿ ಅವರು ವಿವರಿಸಿದ್ದಾರೆ.