October 16, 2026
Friday, October 16, 2026
spot_img

ಬ್ಯಾಡಗಿ ಮೆಣಸಿನಕಾಯಿಗೂ ತಟ್ಟಿದ ಯುದ್ಧದ ಬಿಸಿ: ಸಂಕಷ್ಟದಲ್ಲಿ ಬೆಳೆಗಾರರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲೆ ಇಸ್ರೇಲ್, ಅಮೆರಿಕಾ ಯುದ್ಧದ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ಬಿಸಿ ಮುಟ್ಟಿಸಿದೆ .

ಬ್ಯಾಡಗಿ ಮೆಣಸಿನಕಾಯಿ ಗಲ್ಫ್ ರಾಷ್ಟ್ರಗಳಿಗೆ ಅತೀ ಹೆಚ್ಚು ರಪ್ತು ಆಗುತ್ತಿತ್ತು. ಆದರೆ ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ರಪ್ತು ಆಮದು ಎಲ್ಲವೂ ಬಂದ್ ಆಗಿದೆ.ಹೀಗಾಗಿ ಈಗ ಗಲ್ಫ್ ರಾಷ್ಟ್ರಕ್ಕೆ ಹೋಗಬೇಕಾಗಿದ್ದ ಮೆಣಸಿನಕಾಯಿ ಹಾಗೆಯೇ ಮಾರುಕಟ್ಟೆಗಳಲ್ಲಿ ಸಿಲುಕುವಂತಾಗಿದೆ.

ಇತ್ತ ಬೇರೆ ದೇಶಗಳಿಗೆ ರಪ್ತು ಮಾಡೋಣ ಅಂದರೆ ರಪ್ತು ಮಾಡುವ ಸುಂಕ ಬಾಡಿಗೆಯೂ ಕೂಡಾ ಹೆಚ್ಚಳವಾಗಿದೆ. ಮಲೇಶಿಯಾ ಇಂಡೋನೇಶಿಯಾ, ಬಾಲಿ, ಥೈಲ್ಯಾಂಡ್, ಸಿಂಗಪೂರ್ ದೇಶಗಳಿಗೆ ಮೆಣಸಿನಕಾಯಿ ರಫ್ತಾಗುತ್ತೆ. ಆದರೆ ಕಂಟೇನರ್‌ಗಳ ಬೆಲೆಯಲ್ಲೂ ದಿಢೀರ್ ಏರಿಕೆಯಾಗಿದೆ.

ಈ ಮೊದಲು ಒಂದು ಕಂಟೇನರ್‌ಗೆ 800 ಯು.ಎಸ್ ಡಾಲರ್ ಬಾಡಿಗೆ ಇತ್ತು. ಈಗ ಒಂದು ಕಂಟೇನರ್ ಗಳ ಬಾಡಿಗೆ 3500 ಯುಎಸ್ ಡಾಲರ್ ದಾಟಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 1 ಕಂಟೇನರ್ ಗೆ 1,50,000 ಬಾಡಿಗೆ ಇತ್ತು. ಆದರೆ ಈಗ ಒಂದು ಕಂಟೇನರ್‌ಗೆ ಮೂರುವರೆ ಲಕ್ಷ ರೂಪಾಯಿ ದಾಟಿದೆ.

ಈ ಬ್ಯಾಡಗಿ ಮೆಣಸಿನಕಾಯಿ ಮಸಾಲೆ ಪದಾರ್ಥಗಳ ತಯಾರಿಕೆ, ಖಾರದ ಪುಡಿ ತಯಾರಿಕೆ ಅಷ್ಟೇ ಅಲ್ಲಸೌಂದರ‍್ಯವರ್ಧಕ ಲಿಪ್‌ಸ್ಟಿಕ್‌, ನೇಲ್‌ಪಾಲಿಷ್‌ ತಯಾರಿಕೆಯಲ್ಲೂ ಬಳಕೆಯಾಗುತ್ತದೆ.

Must Read