Wednesday, June 7, 2023

Latest Posts

ನಿಷ್ಠರನ್ನು ಹೈಕಮಾಂಡ್ ಕೈಬಿಡಲ್ಲ: ಸಿಎಂ ಆಗುವ ಅಸೆ ಬಿಚ್ಚಿಟ್ಟ ಡಿಕೆ ಶಿವಕುಮಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಜಯ ಗಳಿಸಿದರೆ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ಮಧ್ಯೆ ಪೈಪೋಟಿ ಇರಲಿದ್ದು, ಈಗಾಗ್ಲೇ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಎಂಬುದನ್ನು ಇಬ್ಬರೂ ನಾಯಕರು ಬಹಿರಂಗವಾಗಿಯೇ ಹೇಳಿದ್ದಾರೆ.

ಇದೀಗ ಈ ವಿಚಾರವಾಗಿ ಡಿಕೆ ಶಿವಕುಮಾರ್ ಮತ್ತೆ ಹೇಳಿಕೆ ನೀಡಿದ್ದು, ತಾವು ಪಕ್ಷಕ್ಕೆ ನಿಷ್ಠರಾಗಿರುವುದಾಗಿಯೂ ತಮ್ಮಂಥವರನ್ನು ಹೈಕಮಾಂಡ್ ಕೈಬಿಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಗಾದಿಗೆ ಹೈಕಮಾಂಡ್ ತಮ್ಮನ್ನೇ ಆಯ್ಕೆ ಮಾಡಬಹುದು ಎಂಬ ಭರವಸೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಭಿನ್ನಮತ ಇದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಡಿಕೆಶಿ, ಪಕ್ಷವು ನಿಷ್ಠರನ್ನು ಪರಿಗಣಿಸಲಿದೆ. ಈ ವಿಚಾರದಲ್ಲಿ ತಮಗೆ ಯಾವುದೇ ಅನುಮಾನಗಳಿಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದೀರಾ ಎಂದು ಕೇಳಿದಾಗ , ನಾನು ಪಕ್ಷದ ನಿಷ್ಠಾವಂತ ವ್ಯಕ್ತಿ. ಎಂದಿಗೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ. ಕರ್ನಾಟಕವನ್ನು ಗೆದ್ದು ಹೈಕಮಾಂಡ್​ಗೆ ಬಿಡಲಿದ್ದೇವೆ. ಹೈಕಮಾಂಡ್ ಯಾವತ್ತಿಗೂ ಪಕ್ಷದ ಪರ ನಿಂತವರ ಬೆಂಬಲಕ್ಕೆ ನಿಂತಿದೆ. ನಮಗೆ ಹೈಕಮಾಂಡ್ ಮೇಲೆ ನಂಬಿಕೆ ಇದೆ. ಪಕ್ಷದ ನಾಯಕತ್ವದ ಮೇಲೆ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.

ನಾನು ನಿದ್ದೆ ಮಾಡಿಲ್ಲ ಮತ್ತು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರಯಾಣಿಸಿ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ. ಎಲ್ಲವನ್ನೂ ಒಮ್ಮತದೊಂದಿಗೆ ಮುನ್ನಡೆಸಿದ್ದೇನೆ. ನಾವು ಬಿಜೆಪಿ ವಿರುದ್ಧ ಪ್ರಬಲ ಸಂಘಟನೆ ಕಟ್ಟಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎನ್ನುವ ಮೂಲಕ ಆಂತರಿಕ ಕಲಹ ಮತ್ತು ಪೈಪೋಟಿಯ ವರದಿಗಳನ್ನು ಡಿಕೆಶಿ ತಳ್ಳಿಹಾಕಿದ್ದಾರೆ. ಬಿಜೆಪಿಯವರು ಕಿಡಿಗೇಡಿತನ ಮಾಡುತ್ತಿದ್ದು, ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಬಿಜೆಪಿಯನ್ನು ಸೋಲಿಸಿ ಕರ್ನಾಟಕದ ಘನತೆಯನ್ನು ಮರುಸ್ಥಾಪಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!