ಹಿಜಾಬ್ ನಮ್ಮ ಧರ್ಮದ ಸಾಂಪ್ರದಾಯಿಕ ಉಡುಪು: ಶಾಸಕಿ ಖನೀಜ್ ಫಾತೀಮಾ

ಹೊಸದಿಗಂತ ವರದಿ, ಕಲಬುರಗಿ:

ಹಿಜಾಬ್ ನಮ್ಮ ಧರ್ಮದ ಸಾಂಪ್ರದಾಯಿಕ ಉಡುಪಾಗಿದ್ದು, ಧರಿಸುವುದು ನಮ್ಮ ಹಕ್ಕು ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ ಹೇಳಿದ್ದಾರೆ.
ಶನಿವಾರ ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನ್ಯಾಷನಲ್ ಕಾಲೇಜು ಮತ್ತು ಆಲ್ ಬದರ್ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿಜಾಬ್ ಧರಿಸುವುದನ್ನು ಸರ್ಕಾರ ಹೇಗೆ ಬ್ಯಾನ್ ಮಾಡುತ್ತದೆ, ನಾವು ನೋಡೆ ಬಿಡುತ್ತೇವೆ ಎಂದರು. ನಾನು ಸದನದಲ್ಲೂ ಹಿಜಾಬ್ ಧರಿಸಿಯೇ ಭಾಗಿಯಾಗುತ್ತಿದ್ದೇನೆ. ಧೈರ್ಯ ಇದ್ದರೆ ನನ್ನನ್ನು ತಡೆಯಲಿ ಎಂದು ಗುಡುಗಿದರು.
ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತಾಡುತ್ತೇನೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಅಲ್ಲಂಪ್ರಭು ಪಾಟೀಲ್, ಶಿವಾನಂದ ಪಾಟೀಲ್, ಲತಾ ರಾಠೋಡ, ಮಜರ್ ಆಲಂ ಖಾನ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!