ಹೊಸದಿಗಂತ ವರದಿ, ವಿಜಯಪುರ:
ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹುಬನೂರು ತಾಂಡಾ -2ರಲ್ಲಿ ಭಾನುವಾರ ನಡೆದಿದೆ.
ಇಲ್ಲಿನ ರೇಷ್ಮಾ ರಾಠೋಡ (25) ಮೃತಪಟ್ಟ ಮಹಿಳೆ.
ಆರೋಪಿ ಅಶೋಕ ರಾಠೋಡ ಎಂಬವನು ಕುಡಿದು ಬಂದು ಮನೆಯಲ್ಲಿ ಪತ್ನಿ ರೇಷ್ಮಾಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದ.
ಗಂಡನ ಕಾಟ ತಾಳದೆ ರೇಷ್ಮಾ ಹುಬನೂರಿನ ತನ್ನ ತವರು ಮನೆಗೆ ಹೋಗಿದ್ದಳು.
ಆರೋಪಿ ಅಶೋಕ ರೇಷ್ಮಾಳ ತವರು ಮನೆಗೆ ಹೋಗಿ, ಅಲ್ಲಿ ಸಲಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಅಶೋಕ ಹಾಗೂ ರೇಷ್ಮಾಳ ಮದುವೆ ಕಳೆದ 11 ವರ್ಷಗಳ ಹಿಂದೆ ನಡೆದಿದ್ದು, ಕೆಲ ತಿಂಗಳಿನಿಂದ ಪತ್ನಿಯ ಮೇಲೆ ಅನೈತಿಕ ಸಂಬಂಧದ ಸಂಶಯ ಮಾಡುತ್ತಿದ್ದ.
ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.