2047ರ ಹೊತ್ತಿಗೆ ಭಾರತ ಅಭಿವೃದ್ಧಿ ರಾಷ್ಟ್ರ: ಇದೇ ಮೋದಿ ಗ್ಯಾರಂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಇದೇ ಮೋದಿ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.

ಇಂದು ಬಿಜೆಪಿ ರಾಷ್ಟ್ರೀಯ ಸಮಾವೇಶದ ಎರಡನೇ ದಿನ. ಇಂದು ಪಕ್ಷದ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಬಿಜೆಪಿ ಸಾಧಿಸಿದ ವೇಗ, ದೊಡ್ಡ ಗುರಿಗಳನ್ನು ಸಾಧಿಸುವ ಧೈರ್ಯ ಅಭೂತಪೂರ್ವವಾಗಿದೆ. ಭಾರತವು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧಿಸಿದ ಎತ್ತರವು ದೇಶವನ್ನು ದೊಡ್ಡ ಸಂಕಲ್ಪದೊಂದಿಗೆ ಒಗ್ಗೂಡಿಸಿದೆ.ನಾವು ಭಾರತವನ್ನು ಅಭಿವೃದ್ಧಿಪಡಿಸಬೇಕು ಎಂಬುದು ನಮ್ಮ ಕನಸು ಮತ್ತು ಸಂಕಲ್ಪವಾಗಿದೆ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಮಾಡಿದ ಕೆಲಸಗಳ ಕುರಿತು ಮಾತನಾಡಿದ ಮೋದಿ, ಇಂದು ಬಿಜೆಪಿ ಯುವ ಶಕ್ತಿ, ಮಹಿಳಾ ಶಕ್ತಿ, ಬಡವರ ಶಕ್ತಿ ಹಾಗೂ ರೈತರನ್ನು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಶಕ್ತಿಯನ್ನಾಗಿ ಮಾಡುತ್ತಿದೆ. ನಮ್ಮ ವಿರೋಧ ಪಕ್ಷಗಳಿಗೆ ಯೋಜನೆಗಳನ್ನು ಹೇಗೆ ಪೂರ್ಣಗೊಳಿಸಬೇಕು ಎಂದು ತಿಳಿದಿಲ್ಲದಿರಬಹುದು. ಆದರೆ ಸುಳ್ಳು ಭರವಸೆಗಳಿಗೆ ಅವರ ಬಳಿ ಉತ್ತರವಿಲ್ಲ.ಇಂದು ಎಲ್ಲಾ ರಾಜಕೀಯ ಪಕ್ಷಗಳು ಭರವಸೆ ನೀಡಲು ಹೆದರುತ್ತಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!