ಹೊಸದಿಗಂತ ವರದಿ, ಮುಂಡಗೋಡ:
ತಾಲೂಕಿನ ಕೊಪ್ಪ-ಇಂದೂರ ಗ್ರಾಮದಲ್ಲಿ ಪತ್ನಿಯ ತವರು ಮನೆ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ನಂದಿಕಟ್ಟಾ ಗ್ರಾಮದ ಅರವಿಂದ ಕೊಟಗುಣಸಿ ಸಾವನ್ನಪ್ಪಿದ ವ್ಯಕ್ತಿ. ಶನಿವಾರ ತಡರಾತ್ರಿ ದೀಪಾವಳಿ ಹಬ್ಬದ ದಿನ ರಾತ್ರಿ ಪತ್ನಿಯ ಮನೆಗೆ ಆಗಮಿಸಿದ್ದ ಅರವಿಂದ ಮನೆಯ ಮುಂಬಾಗದಲ್ಲೇ ಪೆಟ್ರೊಲ್ ಸುರಿದುಕೊಂಡಿದ್ದಾನೆ ಎನ್ನಲಾಗಿದೆ. ಆ ವೇಳೆ ದೀಪಾವಳಿ ನಿಮಿತ್ತ ಹಚ್ಚಿ ಇಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಏಕಾಏಕಿ ಹೊತ್ತಿ ಉರಿದಿದೆ. ತಕ್ಷಣವೇ ಮನೆಯವರು ಹಾಗೂ ಸ್ಥಳೀಯರು ಬೆಂಕಿನಂದಿಸಿ, ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ರವಿವಾರ ಮೃತಪಟ್ಟಿದ್ದಾನೆ.ಆತ್ಮಹತ್ಯೆ ಗೆ ಕಾರಣ ತಿಳಿದುಬಂದಿಲ್ಲ.