ಹೊಸದಿಗಂತ ವರದಿ, ಮುಂಡಗೋಡ:
ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದಿದ್ದ ಮುಸುಕದಾರಿಗಳು ಹರಿದುಕೊಂಡು ಪರಾರಿಯಾದ ಘಟನೆ ಪಟ್ಟಣದಲ್ಲಿ ರವಿವಾರ ನಡೆದಿದೆ.
ಪಟ್ಟಣದ ಕೆ.ಎಚ್ ಕಾಲೂನಿಯ ಹತ್ತಿರ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಸ್ಕ್ ಹಾಕಿಕೊಂಡು ಪಲ್ಸರ್ ಬೈಕನಲ್ಲಿ ಬಂದಿದ್ದ ಕಳ್ಳರು ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರ್ ಕದ್ದಿದ್ದಾರೆ .
ಈ ವೇಳೆ ಅರ್ಧದಷ್ಟು ಚಿನ್ನ ಕಳ್ಳರ ಪಾಲಗಿದ್ದರೆ ಅರ್ಧ ಚಿನ್ನ ರಸ್ತೆಯಲ್ಲಿಯೇ ಬಿದ್ದಿದೆ. ಘಟನಾ ಸ್ಥಳಕ್ಕೆ ಕ್ರೈಂ ಪಿಎಸೈ ಹನಮಂತ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಇತ್ತೀಚಿಗೆ ಹಗಲಿನಲ್ಲಿಯೇ ಪಟ್ಟಣದಲ್ಲಿ ಜನ ದಟ್ಟಣೆ ಇರುವ ಹಾಗೂ ಜನರು ಓಡಾಡು ರಸ್ತೆಗಳಲ್ಲಿ ಪದೇ ಪದೇ ಕಳ್ಳತನವಾಗುತ್ತಿದ್ದನ್ನು ನೋಡಿದರೆ ಯಾವುದೋ ಕಳ್ಳರ ಗ್ಯಾಂಗ್ ಬಂದಿರುವುದು ಜನರಲ್ಲಿ ಸಂಶಯ ಮೂಡಿದೆ.