Tuesday, March 28, 2023

Latest Posts

ಪತ್ನಿಯನ್ನು ಕೊಂದು ತರಕಾರಿ ತೋಟದಲ್ಲಿ ಹೂತಿಟ್ಟ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ವ್ಯಕ್ತಿ ತನ್ನ ಪತಿಯನ್ನು ಕೊಂದು ಹೊಲವೊಂದರಲ್ಲಿ ಆಕೆಯ ಶವವನ್ನು ಹೂತಿಟ್ಟ ಘಟನೆ ನಡೆದಿದೆ.

ದಿನೇಶ್ ಎಂಬಾತ ತರಕಾರಿ ಬೆಳೆಗಾರನಾಗಿದ್ದನು. ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಕೋಪಗೊಂಡ ಆತ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಒಂದು ದಿನ ಮನೆಯಲ್ಲಿಟ್ಟು ಹೊಲದಲ್ಲಿ ಹೂತಿದ್ದಾನೆ.

ಇನ್ನು ಶವ ಬೇಗನೇ ಕೊಳೆಯಲಿ ಎಂದು 30 ಕೆ.ಜಿ ಉಪ್ಪನ್ನು (Salt) ದೇಹದ ಮೇಲೆ ಹಾಕಿದ್ದ. ಅದಾದ ಬಳಿಕ ಕೊಲೆಯನ್ನು ಮುಚ್ಚಿ ಹಾಕಲು, ಶವವನ್ನು ಹೂತು ಹಾಕಿರುವುದು ಯಾರಿಗೂ ಅನುಮಾನ ಬರಬಾರದೆಂದು ಶವವನ್ನು ಹೂತು ಹಾಕಿದ್ದ ಸ್ಥಳದಲ್ಲಿ ತರಕಾರಿಗಳನ್ನು (Vegetable) ಬೆಳೆದಿದ್ದನು.

ಕೆಲ ದಿನಗಳ ನಂತರ ದಿನೇಶ್ ತನ್ನ ಪತ್ನಿ ಕಾಣೆ ಆಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ದಿನೇಶ್ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ದಿನೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!