SHOCKING | ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ, ಖಾಸಗಿ ಅಂಗಕ್ಕೂ ಗಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆಯಾಗಿ ವರ್ಷಗಳೇ ಕಳೆದರೂ ಮಕ್ಕಳಾಗಿಲ್ಲ ಎಂದಾಗ ವೈದ್ಯರ ಬಳಿ ಹೋಗುವ ಬದಲು ಪತಿಯೊಬ್ಬ ತನ್ನ ಪತ್ನಿಯನ್ನೇ ಮನಬಂದಂತೆ ಥಳಿಸಿದ್ದಾನೆ.

ಉತ್ತರಪ್ರದೇಶದ ಲಕ್ನೋ ನಿವಾಸಿ ರವೀಂದ್ರ ಮದುವೆಯಾಗಿ ಆರು ವರ್ಷಗಳಾದರೂ ಮಕ್ಕಳಾಗಿಲ್ಲ ಎನ್ನುವ ಚಿಂತೆಯಲ್ಲಿದ್ದ. ಈ ವೇಳೆ ಪ್ರತೀ ಬಾರಿ ಇದಕ್ಕೆ ಹೆಂಡತಿಯೇ ಕಾರಣ ಎಂದು ರವೀಂದ್ರ ದೂಷಿಸುತ್ತಿದ್ದ. ಇದರಿಂದ ಬೇಸರಿಸಿಕೊಂಡ ಪತ್ನಿ ಮನೆ ಬಿಟ್ಟು ತಾಯಿ ಮನೆ ಸೇರಿದ್ದಳು.

ಎಂಟು ತಿಂಗಳಿಂದ ತಾಯಿ ಮನೆಯಲ್ಲೇ ಇದ್ದ ಪತ್ನಿಯನ್ನು ಮನವೊಲಿಸಿ ರವೀಂದ್ರ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆಕೆಯ ಜತೆ ಲೈಂಗಿಕ ಕ್ರಿಯೆ ನಡೆಸಲು ಇಚ್ಛಿಸಿದ್ದು, ಪತ್ನಿ ವಿರೋಧಿಸಿದ್ದಾರೆ. ಕೋಪಗೊಂಡ ರವೀಂದ್ರ ಪತ್ನಿಯನ್ನು ಥಳಿಸಿದ್ದು, ಖಾಸಗಿ ಅಂಗಕ್ಕೆ ಹರಿತವಾದ ಬ್ಲೇಡ್‌ನಿಂದ ಇರಿದಿದ್ದಾನೆ.

ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರವೀಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ. ಆತ ತಪ್ಪಿಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!