Saturday, December 9, 2023

Latest Posts

SHOCKING | ಸೆಕ್ಸ್‌ಗೆ ಒಪ್ಪದ ಪತ್ನಿಯನ್ನೇ ಕೊಂದ ಪತಿ, ಕಂದಮ್ಮಗಳು ಅನಾಥ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯಾಸವಾಗಿದೆ ಎಂದು ಸೆಕ್ಸ್‌ಗೆ ನಿರಾಕರಿಸಿದ ಪತ್ನಿಯನ್ನು ಉಸಿರುಗಟ್ಟಿಸಿ ಪತಿಯೊಬ್ಬ ಕೊಲೆ ಮಾಡಿದ್ದಾನೆ. ಹೈದರಾಬಾದ್‌ನಲ್ಲಿ ತರುಣ್(24) ಹಾಗೂ ಝಾನ್ಸಿ(20) ದಂಪತಿ ವಾಸವಿದ್ದು, ಇವರಿಬ್ಬರು ಪ್ರೀತಿಸಿ ಮದುವೆಯಾದವರು. ಇವರಿಬ್ಬರಿಗೆ ಎರಡು ವರ್ಷದ ಮಗ ಹಾಗೂ ಒಂದು ತಿಂಗಳ ಹೆಣ್ಣು ಮಗು ಇದೆ.

ಆಟೋ ಚಾಲಕನಾಗಿದ್ದ ತರುಣ್ ಪತ್ನಿ ಜೊತೆ ಹೈದರಾಬಾದ್‌ಗೆ ವಲಸೆ ಬಂದಿದ್ದ, ಕುಟುಂಬದಲ್ಲಿ ಸುಖ ಶಾಂತಿ ಎಲ್ಲವೂ ಇತ್ತು. ಪತ್ನಿಯೊಂದಿಗೆ ತರುಣ್ ಲೈಂಗಿಕ ಕ್ರಿಯೆ ಬಯಸಿದ್ದು, ಝಾನ್ಸಿ ಸುಸ್ತಾಗಿದೆ ಎಂದು ನಿರಾಕರಿಸಿದ್ದಾಳೆ. ಈ ವೇಳೆ ಆತ ಅವಳ ಮಾತಿಗೆ ಬೆಲೆ ಕೊಡದೇ ಒತ್ತಾಯದಿಂದ ಸೆಕ್ಸ್‌ಗೆ ಯತ್ನಿಸಿದ್ದಾನೆ. ಇದರಿಂದ ಝಾನ್ಸಿ ಜೋರಾಗಿ ಕೂಗಿದ್ದಾಳೆ. ಆಕೆಯ ಬಾಯಿ ಮತ್ತು ಮೂಗನ್ನು ತರುಣ್ ತನ್ನ ಕೈಯಿಂದ ಗಟ್ಟಿಯಾಗಿ ಮುಚ್ಚಿದ್ದಾನೆ.

ಕೆಲವೇ ನಿಮಿಷಗಳಲ್ಲಿ ಝಾನ್ಸಿ ಬಾಯಿಂದ ನೊರೆ ಬರಲು ಆರಂಭವಾಗಿದೆ ಆಗ ಭಯಬಿದ್ದ ತರುಣ್ ತನ್ನ ಕುಟುಂಬದವರಿಗೆ ಕರೆ ಮಾಡಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಝಾನ್ಸಿ ಮೃತಪಟ್ಟಿದ್ದು, ಎರಡು ಪುಟಾಣಿ ಮಕ್ಕಳು ತಾಯಿಯಿಲ್ಲದೆ ತಬ್ಬಲಿಗಳಾಗಿದ್ದಾರೆ.

ತರುಣ್ ಸಾವಿನ ಕಾರಣ ಯಾರಿಗೂ ತಿಳಿಸಿರಲಿಲ್ಲ. ಆದರೆ ಝಾನ್ಸಿ ತಂದೆ ತರುಣ್ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರ ವಿಚಾರಣೆ ವೇಲೆ ಆತ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಆತ ಜೈಲುಪಾಲಾಗಿದ್ದು, ಮಕ್ಕಳಿಗೆ ತಂದೆ ಹಾಗೂ ತಾಯಿ ಯಾರೂ ಇಲ್ಲದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!