ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಸಿ ಮದುವೆಯಾಗಿದ್ದ ಸಮಂತಾ-ನಾಗಚೈತನ್ಯ ಜೋಡಿ ವಿಚ್ಛೇದನ ಪಡೆದು ವರ್ಷಗಳೇ ಕಳೆದು ಹೋಗಿವೆ.
ಸಮಂತಾ ಶೂಟಿಂಗ್, ಅಧ್ಯಾತ್ಮ, ಟ್ರಾವೆಲಿಂಗ್‌ನಲ್ಲಿ ಬ್ಯುಸಿಯಾಗಿದ್ರೆ ಇತ್ತ ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಜತೆ ಡೇಟಿಂಗ್‌ನಲ್ಲಿದ್ದಾರೆ ಎನ್ನೋ ಸುದ್ದಿಗಳು ಹರಿದಾಡಿದ್ದವು.
ಇದೀಗ ಮತ್ತೆ ಸಮಂತಾ ಹಾಗೂ ನಾಗಚೈತನ್ಯ ಒಂದಾಗುವ ಸೂಚನೆ ಕಾಣಿಸ್ತಿದೆ, ಹೌದು, ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಒಂದು ನಾಯಿಯನ್ನು ದತ್ತು ತೆಗೆದುಕೊಂಡಿದ್ದರು. ಈ ನಾಯಿಯನ್ನು ನಾಗಚೈತನ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದೀಗ ನಾಯಿಯ ಫೋಟೊ ಪೋಸ್ಟ್ ಮಾಡಿದ್ದಾರೆ. ಕೆಳಗೆ ವೈಬ್ ಎನ್ನುವ ಕ್ಯಾಪ್ಷನ್ ಹಾಕಿದ್ದಾರೆ.
ಸ್ಯಾಮ್ ಹಾಗೂ ನಾಗಚೈತನ್ಯ ಒಟ್ಟಿಗೇ ತೆಗೆದುಕೊಂಡಿದ್ದ ನಾಯಿಮರಿ ಫೋಟೊ ನೋಡಿ ಫ್ಯಾನ್ಸ್ ಇದು ಒಂದಾಗೋ ಸೂಚನೆ, ಸ್ಯಾಮ್‌ರನ್ನು ನಾಗಚೈತನ್ಯ ಮಿಸ್ ಮಾಡ್ಕೊಳ್ತಿದ್ದಾರೆ ಎಂದೆಲ್ಲಾ ಹೇಳ್ತಿದ್ದಾರೆ.
ಇದು ನಿಜವೋ ಅಥವಾ ಜನರ ಊಹೆಯಷ್ಟೇಯೋ ಕೆಲವೇ ದಿನಗಳಲ್ಲಿ ಉತ್ತರ ತಿಳಿಯಲಿದೆ.