ನಿಮ್ಮ ರಾಜ್ಯದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಿಸಿದ್ದು ಯಾಕೆ?: ಸುಪ್ರೀಂ ಪ್ರಶ್ನೆಗೆ ಉತ್ತರಿಸಿದ ತಮಿಳುನಾಡು ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಮೇ 12ರಂದು ಸುಪ್ರೀಂ ಕೋರ್ಟ್ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾವನ್ನು ಯಾಕೆ ನಿಮ್ಮ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ ಎಂದು ನೋಟಿಸ್​​ ನೀಡಿತ್ತು .

ಇದೀಗ ಈ ನೋಟಿಸ್​​ಗೆ ಉತ್ತರಿಸಿದ ತಮಿಳುನಾಡು ಸರ್ಕಾರ, ದಿ ಕೇರಳ ಸ್ಟೋರಿ ಬಿಡುಗಡೆಗೊಂಡು 2 ದಿನವಾದರು ಸಿನಿಮಾ ನೋಡಲು ಯಾರು ಬರುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯಾದ್ಯಂತ ಥಿಯೇಟರ್​​​ ಮಾಲೀಕರು ಈ ಕ್ರಮಕ್ಕೆ ಬಂದಿದ್ದಾರೆ ಎಂದು ಉತ್ತರಿಸಿದೆ.

ಮಲ್ಟಿಪ್ಲೆಕ್ಸ್​​​ ಮಾಲೀಕರು ಮೇ7 ರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಇದಕ್ಕೆ ಕಾರಣ ಪ್ರಸಿದ್ಧ ನಟರ ಕೊರತೆ, ಕಳಪೆ ಪ್ರದರ್ಶನ ಮತ್ತು ಹೆಚ್ಚಾಗಿ ಈ ಚಿತ್ರವನ್ನು ನೋಡು ಜನರೇ ಇರಲಿಲ್ಲ ಎಂದು ತಮಿಳುನಾಡು ಸರ್ಕಾರ ಪತ್ರದಲ್ಲಿ ಉತ್ತರಿಸಿದೆ. ಜತೆಗೆ ಇದು ಹಿಂದಿ ಭಾಷೆಯಲ್ಲಿ ಮೇ 5ರಂದು 19 ಮಲ್ಟಿಪ್ಲೆಕ್ಸ್​​​ಗಳಲ್ಲಿ ​​ ಬಿಡುಗಡೆಯಾಗಿದೆ ಎಂದು ಹೇಳಿದೆ.

ಈ ಚಿತ್ರದಲ್ಲಿ ಯಾವುದೇ ಜನಪ್ರಿಯ ನಟರು ಇಲ್ಲ ಅದಕ್ಕಾಗಿ ಕಳಪೆ ಪ್ರದರ್ಶನಗೊಂಡು ಬಾಕ್ಸ್​​ ಆಫೀಸ್​​ಗೆ​​ ಭಾರೀ ತೊಂದರೆಯಾಗಿದೆ ಎಂದು ಹೇಳಿದೆ. ಇದರ ಜತೆಗೆ ಈ ಸಿನಿಮಾವನ್ನು ನೋಡಲು ಅಷ್ಟೊಂದು ಜನ ಬಂದಿಲ್ಲ ಎಂದು ಸ್ವತಃ ಚಲನಚಿತ್ರ ಪ್ರದರ್ಶಕರೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಇನ್ನೂ ಈ ಸಿನಿಮಾ ನೋಡು ಜನ ಬರಬೇಕು ಎಂದು ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!