ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ವಿವಾದಕ್ಕೀಡಾಗಿರುವ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮುಸ್ಲಿಂ ಯುವತಿ ಪಾತ್ರ ಮಾಡಿರುವ ಸೋನಿಯಾ ಬಾಲಾನಿಗೆ ಕೊಲೆ ಬೆದರಿಕೆ ಹಾಕಿರುವ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ನಟಿ ಅದಾ ಶರ್ಮಾಗೂ ಕೊಲೆ ಬೆದರಿಕೆ ಎದುರಾಗಿದ್ದು, ಪೊಲೀಸ್ ಭದ್ರತೆ ನೀಡಲಾಗಿತ್ತು. ಇದೀಗ ಹಿಂದೂ ಹುಡುಗಿಯಾದ ಸೋನಿಯಾ ಮುಸ್ಲಿಂ ಪಾತ್ರ ಮಾಡಿದ್ದು, ಸಿನಿಮಾದಲ್ಲಿ ಹಿಂದೂ ಹುಡುಗಿಯರನ್ನು ಮುಸ್ಲಿಂ ಆಗಿ ಪರಿವರ್ತಿಸುವ ಕೆಲಸ ಮಾಡಿದ್ದಾರೆ.
ಸೋನಿಯಾ ಅದ್ಭುತವಾಗಿ ನಟನೆ ಮಾಡಿದ್ದು, ಅವರಿಗೆ ಸಾಕಷ್ಟು ಕೊಲೆ ಬೆದರಿಕೆ ಸಂದೇಶಗಳು ಎದುರಾಗಿವೆ. ಅವರಿಗೂ ಭದ್ರತೆ ಅತ್ಯಾವಶ್ಯಕ ಎಂದು ಸಿನಿಮಾ ತಂಡ ಮನವಿ ಮಾಡಿದೆ.