CINEMA | ಭಾರೀ ವಿರೋಧದ ನಡುವೆ ನಾಳೆ ರಿಲೀಸ್ ಆಗ್ತಿದೆ ‘ದಿ ಕೇರಳ ಸ್ಟೋರಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ರೇಲರ್ ಮೂಲಕ ಭಾರೀ ವಿವಾದಕ್ಕೆ ಗುರಿಯಾಗಿರುವ ದಿ ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿರೋದದ ನಡುವೆಯೂ ನಾಳೆ ರಿಲೀಸ್ ಆಗಲಿದೆ.

ಅನೇಕ ಸಂಘಟನೆಗಳು ಈ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಒತ್ತಡ ಹೇರಿವೆ, ಕಾನೂನಾತ್ಮಕಾವಾಗಿ ಸಿನಿಮಾ ರಿಲೀಸ್ ಆಗದಂತೆ ತಡೆಹಿಡಿಯದ ಕಾರಣ ಸರ್ಕಾರ ಮಧ್ಯಪ್ರವೇಶ ಮಾಡಿ ಕೋಮುಗಲಭೆ ಸೃಷ್ಟಿಸುವ ಈ ಸಿನಿಮಾ ಬ್ಯಾನ್ ಮಾಡಬೇಕು ಎಂದು ಸಾಕಷ್ಟು ಮುಸ್ಲಿಂ ಸಂಘಟನೆಗಳು ಒತ್ತಡ ಹಾಕಿವೆ.

ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ನಾಳೆಯೇ ರಿಲೀಸ್ ಆಗುತ್ತಿದ್ದು, ಸಿನಿಮಾ ಗೆಲ್ಲುವ ನಿರೀಕ್ಷೆಯಲ್ಲಿದೆ ಚಿತ್ರತಂಡ. ಸೆನ್ಸಾರ್ ಮಂಡಳಿ ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಹಾಗೂ ಸಿನಿಮಾಗೆ ಎ ಪ್ರಮಾಣಪತ್ರ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!