ಕೊರಿಯನ್ನರ ಬಗ್ಗೆ ಮಾತನಾಡಿ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡ ಕಾಲಿವುಡ್​ ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಲಿವುಡ್​ ಸೂಪರ್​ ಸ್ಟಾರ್​ ಶಿವಕಾರ್ತಿಕೇಯನ್​ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದರಿಂದ ಅವರು ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

ಹೌದು, ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡುವಾಗ ಕೊರಿಯನ್ನರ ಬಗ್ಗೆ ಶಿವಕಾರ್ತಿಕೇಯನ್​ ಆಡಿರುವ ಮಾತುಗಳು ಜನಾಂಗೀಯ ನಿಂದನೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಕ್ಕಳನ್ನು ಉದ್ದೇಶಿಸಿ, ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಡಾನ್​ ಸಿನಿಮಾದ ಕಾಮಿಡಿ ದೃಶ್ಯದ ಕುರಿತು ಶಿವಕಾರ್ತಿಕೇಯನ್​ ಮಾತನಾಡಿದರು. ಈ ವೇಳೆ ಕೊರಿಯನ್​ ಸಿನಿಮಾಗಳನ್ನು ನೋಡಿದಾಗಲೆಲ್ಲ ಅವರಲ್ಲಿರುವ ಎಲ್ಲಾ ನಟರು ಒಂದೇ ಎಂದು ನನಗೆ ಅನಿಸುತ್ತದೆ. ಅದರಲ್ಲೂ ಕೊರಿಯನ್​ ಮಹಿಳೆಯರಂತೂ ಥೇಟ್​ ಪುರುಷರಂತೆ ಕಾಣುತ್ತಾರೆ. ಒಬ್ಬರಿಗೊಬ್ಬರು ವ್ಯತ್ಯಾಸವೇ ಇಲ್ಲ ಎಂದರು. ಅಲ್ಲದೆ, ಕೊರಿಯನ್​ ಭಾಷೆಯನ್ನು ಸಹ ಅಣುಕಿಸಿದರು.ಅವರ ಮಾತಿನ ವಿಡಿಯೋ ವೈರಲ್​ ಆಗಿದ್ದು, ಜನಾಂಗೀಯ ನಿಂದನೆ ಆರೋಪ ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!