ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನಲ್ಲಿ ಶಾಲಾ ಪ್ರವಾಸಕ್ಕೆ ತೆರಳಿದ್ದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿದೆ.
ದೇವದುರ್ಗ ಹೊರವಲಯದ ಅಂಜಳ ಕ್ರಾಸ್ ಬಳಿ ರಾತ್ರಿ ಎರಡು ಗಂಟೆಗೆ ಬಸ್ ಪಲ್ಟಿಯಾಗಿದ್ದು, ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪ್ರೌಢ ಶಾಲಾ ವಿದ್ಯಾರ್ಥಿಗಳು ಟ್ರಾವೆಲ್ ಮಾಡುವಾಗ ಅಂಜಳ ಕ್ರಾಸ್ ಬಳಿ ಬಸ್ ಗದ್ದೆಗೆ ಉರುಳಿ ಬಿದ್ದಿದೆ. ಅಪಘಾತ ನಡೆದ ಗಂಟೆಯ ಬಳಿಕ ಮಕ್ಕಳನ್ನು ಬೇರೆ ಬಸ್ಗೆ ಹತ್ತಿಸಿ ಮನೆಗೆ ಕಳುಹಿಸಲಾಗಿದೆ.