ಶ್ರೀನಿವಾಸ ಕಲ್ಯಾಣೋತ್ಸವ | ಕರಪತ್ರ ಹಂಚುವ ಮೂಲಕ ಮತದಾನಕ್ಕೆ ಆಮಿಷ: ನೋಡಲ್ ಅಧಿಕಾರಿಯಿಂದ ನೋಟೀಸ್

ಹೊಸದಿಗಂತ ವರದಿ ಪುತ್ತೂರು:

ಚುನಾವಣಾ ಪ್ರಚಾರ ಪತ್ರಿಕೆ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದ ಕರ ಪತ್ರದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಚಿತ್ರ ಹಾಗೂ ಪುತ್ತಿಲ ಪರಿವಾರ ಎಂಬ ಚಿಹ್ನೆಯನ್ನು ಬಳಸುವ ಮೂಲಕ ಮತದಾರರಿಗೆ ಆಮಿಷ ಒಡ್ಡುವ ಕಾರ್ಯ ಮಾಡಲಾಗುತ್ತಿದೆ ಎಂದು ನಗರ ಸಭೆಯ ನೋಡಲ್ ಅಧಿಕಾರಿ ಅಭ್ಯರ್ಥಿಯೊಬ್ಬರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.

ಪುತ್ತೂರು ನಗರಸಭಾ ಉಪಚುನಾವಣೆ ಕಾರ್ಯ ಕಲಾಪಗಳು ನಡೆಯುತ್ತಿರುವ ಸಂದರ್ಭದಲ್ಲಿ ಪುತ್ತಿಲ ಪರಿವಾರ ಎಂಬ ಸಂಘಟನೆಯ ಬೆಂಬಲಿತ ಅಭ್ಯರ್ಥಿಗಳಾದ ಅನ್ನಪೂರ್ಣ ಎಸ್.ಕೆ. ರಾವ್ ಹಾಗೂ ಚಿಂತನ್ ಪಿ. ಎಂಬವರು ಕರಪತ್ರಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಚಿತ್ರವನ್ನು ಹಾಗೂ ಪುತ್ತಿಲ ಪರಿವಾರ ಎಂದು ಚಿಹ್ನೆ ಪ್ರಕಟಿಸುತ್ತಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಕೆಲಸವನ್ನು ಮಾಡುತ್ತಿದೆ. ಚುನಾವಣಾಧಿಕಾರಿಗಳನ್ನು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿ.22ಕ್ಕೆ ದೂರು ದಾಖಲಾಗಿರುತ್ತದೆ.

ಪುತ್ತೂರು 11ನೇ ವಾರ್ಡ್ ನೆಲ್ಲಿಕಟ್ಟೆಯ ವ್ಯಾಪ್ತಿಯಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಮತದಾರರಿಗೆ ಪುತ್ತಿಲ ಪರಿವಾರದಿಂದ ರಾಜಕೀಯ ದೃಷ್ಟಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಕರಪತ್ರ ಹಂಚುವ ಮೂಲಕ ಮತದಾನಕ್ಕೆ ಆಮಿಷ ಒಡುತ್ತಿದ್ದಾರೆ. ಹಣದ ಲಾಬಿ ಯು ಉಚಿತ ಊಟ, ತಿಂಡಿ ಬಟ್ಟೆ, ದೇವರ ಪ್ರಸಾರ ನೀಡುವ ಆಮಿಷವನ್ನು ಈ ಕಾರ್ಯಕ್ರಮದ ಮೂಲಕ ಪುತ್ತಿಲ ಪರಿವಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ದೂರು ದಾಖಲಾಗಿರುತ್ತದೆ.

ತಕ್ಷಣವೇ ಫಲಕಗಳನ್ನು ತೆರವುಗೊಳಿಸಿ
ಈ ನೋಟೀಸು ನೀಡಿದ 24 ಗಂಟೆಯೊಳಗೆ ಕ್ರಮ ಕೈಗೊಂಡು ವರದಿ ಮಾಡುವಂತೆ ಸೂಚಿಸಿದೆ ಎಂದು ಪುತ್ತೂರು ನಗರ ಸಭಾ ಉಪಚುನಾವಣೆ 2023 ಎಂ.ಸಿ.ಸಿ. ನೋಡಲ್ ಅಧಿಕಾರಿಗಳು ಅನ್ನಪೂರ್ಣ ಎಸ್.ಕೆ. ರಾವ್ ಹಾಗೂ ಚಿಂತನ್ ಪಿ. ಅವರಿಗೆ ಡಿ.22ರಂದು ನೋಟೀಸ್ ನೀಡಿದ್ದು, ಪ್ರತಿಯನ್ನು ಪುತ್ತೂರು ನಗರ ಸಭಾ ಚುನಾವಣಾಧಿಕಾರಿ ಹಾಗೂ ಪುತ್ತೂರು ತಹಸೀಲ್ದಾರರಿಗೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!