Saturday, February 4, 2023

Latest Posts

ಆಜಾದ್​ ಜತೆ ಹೊರಟ ನಾಯಕರು ಮತ್ತೆ ಬಂದರು ಕಾಂಗ್ರೆಸ್​ ಮನೆಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಅನ್ನು ಹಿರಿಯ ನಾಯಕ ಗುಲಾಂ ನಬಿ ಆಜಾದ್ ತೊರೆದಿದ್ದ ವೇಳೆ ಅವರ ಜೊತೆಗೆ ಪಕ್ಷ ತೊರೆದಿದ್ದ ಜಮ್ಮು ಕಾಶ್ಮೀರದ ಮಾಜಿ ಡಿಸಿಎಂ ತಾರಾಚಂದ್ ಸೇರಿ 17 ಮುಖಂಡರು ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಮತ್ತು ಮಾಜಿ ಪಿಸಿಸಿ ಮುಖ್ಯಸ್ಥ ಪೀರ್ಜಾದಾ ಮೊಹಮ್ಮದ್ ಸಯೀದ್ ಸೇರಿದಂತೆ ಡೆಮಾಕ್ರಟಿಕ್ ಆಜಾದ್ ಪಾರ್ಟಿಯ (ಡಿಎಪಿ) ಹದಿನೇಳು ಮಾಜಿ ನಾಯಕರು ಇಂದು ಕಾಂಗ್ರೆಸ್ ಗೆ ಮರಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ನಾಯಕರನ್ನು ಸ್ವಾಗತಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆಗೆ ಮುಂಚಿತವಾಗಿ ಅವರು ತಮ್ಮ ಮನೆಗೆ ಮರಳುತ್ತಿರುವುದು ಪಕ್ಷಕ್ಕೆ ಸಂತೋಷದ ದಿನವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಮರಳಲು ಡಿಎಪಿ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರೊಂದಿಗೆ ಯಾವುದೇ ಮಾತುಕತೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಉತ್ತರಿಸಲು ನಿರಾಕರಿಸಿದ್ದಾರೆ.

ಯಾತ್ರೆಗೆ ಆಜಾದ್ ಅವರನ್ನು ಆಹ್ವಾನಿಸಲಾಗಿದೆಯೇ ಎಂಬ ಬಗ್ಗೆ ಅವರು, ಮಾತನಾಡಿ, ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇರುವವರು ಭಾರತ್ ಜೋಡೋ ಯಾತ್ರೆಗೆ ಸೇರಲು ಸ್ವಾಗತ ಎಂದು ಹೇಳಿದರು.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಗುರುವಾರ ಸಂಜೆ ಉತ್ತರ ಪ್ರದೇಶದಿಂದ ಹರ್ಯಾಣಕ್ಕೆ ಮರುಪ್ರವೇಶಿಸಿದೆ. ಯಾತ್ರೆಯು ಕರ್ನಾಲ್, ಕುರುಕ್ಷೇತ್ರ ಮತ್ತು ಅಂಬಾಲಾ ಮೂಲಕ ಸಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!