ಬಾಬಾ ರಾಮ್‌ದೇವ್ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್ಯುವೇದ ಉತ್ಪನ್ನಗಳ ವಿವಾದಾತ್ಮಕ ಜಾಹೀರಾತುಗಳನ್ನು ಎದುರಿಸಿದ ನಂತರ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪನಿಯ 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.

ಪತಂಜಲಿ ಗ್ರೂಪ್‌ನ ಭಾಗವಾಗಿರುವ ದಿವ್ಯ ಫಾರ್ಮಸಿ ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್‌’, ‘ಸ್ವಾಸರಿ ವಟಿ’, ‘ಬ್ರೋನ್‌ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್‌’, ‘ಮುಕ್ತಾ ವಟಿ ಎಕ್ಸ್ಟ್ರಾ ಪವರ್‌’, ‘ಲಿಪಿಡೋಮ್‌’, ‘ಬಿಪಿ ಗ್ರಿಟ್‌’, ‘ಮಧುಗ್ರಿಟ್‌’, ‘ಮಧುನಾಶಿನಿ ವಟಿ ಎಕ್ಟ್ರಾ ಪವರ್‌’, ‘ಲಿವಾಮೃತ್‌ ಅಡ್ವಾನ್ಸ್‌’, ‘ಲಿವೋಗ್ರಿಟ್‌’ ಮತ್ತು ‘ಐಗ್ರಿಟ್‌ ಗೋಲ್ಡ್‌ ಅನ್ನು ನಿಲ್ಲಿಸಲಾಗಿದೆ.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ, ಪತಂಜಲಿ ಅಲೋಪತಿ ವೈದ್ಯಕೀಯ ವ್ಯವಸ್ಥೆಯನ್ನು ಟೀಕಿಸಲು ಪ್ರಚಾರ ಮಾಡಿತು. ಇದನ್ನು ಪ್ರಶ್ನಿಸಿ ಮೊಕದ್ದಮೆ ದಾಖಲಿಸಿದ್ದಕ್ಕೆ ಪತಂಜಲಿ ಇತ್ತೀಚೆಗೆ ಕ್ಷಮೆಯಾಚಿಸಿದೆ. ಮಂಗಳವಾರವೂ ವಿಚಾರಣೆ ಮುಂದುವರಿಯಲಿದ್ದು, ಅದಕ್ಕೂ ಮುನ್ನ ಪರವಾನಗಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!