‘ಕಾಟೇರ’ ಚಿತ್ರ ತಂಡ ಪಾರ್ಟಿ ನಡೆಸಿದ್ದ ಪಬ್ ನ ಲೈಸೆನ್ಸ್ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ತಂಡದ ಪಾರ್ಟಿ ನಡೆಸಿದ್ದ ಜೆಟ್ ಲ್ಯಾಗ್ ರೆಸ್ಟೋ ಬಾರ್ ಪಬ್ ನ ಲೈಸೆನ್ಸ್ ಅಮಾನತು ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಅಬಕಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದು, 25 ದಿನಗಳ ಕಾಲ ಮದ್ಯ ಮಾರಾಟ ಮಾಡಲು ನಿಷೇಧ ಹೇರಿದ್ದಾರೆ.
ಈ ಪಬ್ ನಲ್ಲಿ ‘ಕಾಟೇರ’ ಚಿತ್ರತಂಡದಿಂದ ಸಕ್ಸಸ್ ಪಾರ್ಟಿ ಮಾಡಲಾಗಿತ್ತು. ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿ ಚಿತ್ರರಂಗದ ಹಲವು ನಟರು ಭಾಗಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿ ಪೊಲೀಸ್ ವಿಚಾರಣೆ ಕೂಡ ನಡೆಸಲಾಗಿದೆ. ಈಗ 25 ದಿನ ಪಬ್ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!