ಕೊನೆಗೂ ಬೋನಿಗೆ ಬಿದ್ದ ಒಂಟಿ ವಾನರ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ತಾಲೂಕಿನ ಕುಪ್ಪೆಪದವು ಮತ್ತು ಎಡಪದವು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯ ನೆಲ್ಲಿಜೋರ ಎಂಬಲ್ಲಿ ಇಬ್ಬರಿಗೆ ಕಚ್ಚಿ ಗಂಭೀರ ಗಾಯಗೊಳಿಸಿ, ಜನರ ಮೇಲೆ ದಾಳಿ ನಡೆಸುತ್ತಿದ್ದ ಒಂಟಿ ವಾನರ ಮಂಗಳವಾರ ಸಂಜೆ 6 ಗಂಟೆಗೆ ಅರಣ್ಯ ಇಲಾಖೆಯ ಬೋನಿನೊಳಗೆ ಸೆರೆಯಾಗಿದ್ದಾನೆ.

ರೇಂಜ್ ಅರಣ್ಯ ಅಧಿಕಾರಿ ರಾಜೇಶ್, ಡೆಪ್ಯುಟಿ ರೇಂಜ್ ಅರಣ್ಯ ಅಧಿಕಾರಿ ಜಗರಾಜ್ ಮತ್ತು ಅರಣ್ಯ ವೀಕ್ಷಕ ದಿವಾಕರ ಅವರುಗಳ ತಂಡ ಉಪಟಳ ನೀಡುತ್ತಿದ್ದ ಕೋತಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಸೃಷ್ಠಿಯಾಗಿದ್ದ ಭಯದ ವಾತಾವರಣ ತಿಳಿಯದಂತಾಗಿದೆ.

ಕೋತಿಯನ್ನು ಸೆರೆ ಹಿಡಿಯುವ ಸತತ ಪ್ರಯತ್ನ ವಿಫಲವಾಗಿ, ಸುಮಾರು ಒಂದು ತಿಂಗಳಿನಿಂದ ಅರಣ್ಯ ಇಲಾಖೆಗೆ ತಲೆ ನೋವಾಗಿ ಕಾಡಿದ್ದ ಕೋತಿ ಕಳೆದ 9 ದಿನಗಳಿಂದ ನಾಪತ್ತೆಯಾಗಿ ಶನಿವಾರದಿಂದ ಮತ್ತೆ ಕಾಣಿಸಿಕೊಂಡಿತ್ತು.

ಸೋಮವಾರ ವಲಯ ಅರಣ್ಯಾಧಿಕಾರಿ ರಾಜೇಶ್ ಅವರು ಸಿಬ್ಬಂದಿಯೊಂದಿಗೆ ದಿನೇಶ್ ಅವರ ಮನೆಗೆ ಭೇಟಿ ನೀಡಿ ಕೋತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಕೋತಿಯ ಚಲನವಲನ ದ ಬಗ್ಗೆ ಪರಿಶೀಲನೆ ನಡೆಸಿದ್ದರು. ಮಂಗಳವಾರ ಮುಂಜಾನೆ 6 ಗಂಟೆಗೆ ದಿನೇಶ್ ಅವರ ಮನೆಗೆ ಬಂದಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನೊಳಗೆ ಬಾಳೆ ಹಣ್ಣುಗಳನ್ನು ಇಟ್ಟು, ಬೋನಿನ ಬಾಗಿಲಿಗೆ ಹಗ್ಗವೊಂದನ್ನು ಕಟ್ಟಿ ಅದರ ಒಂದು ತುದಿಯನ್ನು ಹಿಡಿದುಕೊಂಡು ದಿನೇಶ್ ಅವರ ಮನೆಯೊಳಗೆ ಕೋತಿಯ ಬರುವಿಕೆಗಾಗಿ ಕಾದಿದ್ದರು.ಸಂಜೆ 6 ಗಂಟೆ ಸುಮಾರಿಗೆ ಕೋತಿ ದಿನೇಶ್ ಅವರ ಮನೆಗೆ ಬಂದು, ಬೋನಿನೊಳಗೆ ಇಟ್ಟಿದ್ದ ಬಾಳೆ ಹಣ್ಣುಗಳನ್ನು ತಿನ್ನಲು ಬೋನಿನೊಳಗೆ ಹೋದ ತಕ್ಷಣ ಬೋನಿನ ಬಾಗಿಲಿಗೆ ಕಟ್ಟಿದ್ದ ಹಗ್ಗವನ್ನು ಎಳೆದು ಬಾಗಿಲನ್ನು ಮುಚ್ಚಲಾಯಿತು. ಈ ಮೂಲಕ ವಾನರನ ಉಪಟಳಕ್ಕೆ ಅಂತ್ಯ ಹಾಡಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!