ಲಿವ್‌ಇನ್ ಪಾರ್ಟ್ನರ್ ಕೊಂದು ಚಾಪೆಯಲ್ಲಿ ಸುತ್ತಿಟ್ಟ ಪ್ರೇಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿ ತನ್ನ ಲಿವ್‌ಇನ್ ಪಾರ್ಟ್ನರ್‌ನನ್ನೇ ಕೊಂದು ಚಾಪೆಯಲ್ಲಿ ಸುತ್ತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ನಿರುದ್ಯೋಗಿಯಾಗಿದ್ದ ಹಾರ್ದಿಕ್ ಶಾ ತನ್ನ ಸಂಗಾತಿ ಮೇಘಾ(37)ರನ್ನು ಕೊಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೇಘಾಳನ್ನು ಕೊಂದು ಎಸ್ಕೇಪ್ ಆಗಲು ಮನೆಯ ಕೆಲ ವಸ್ತುಗಳನ್ನು ಹಾರ್ದಿಕ್ ಮಾರಿಕೊಂಡಿದ್ದ. ಪಾಲ್ಘರ್‌ನಿಂದ ಎಸ್ಕೇಪ್ ಆಗುವಾಗ ಸಿಕ್ಕಿಬಿದ್ದಿದ್ದು, ಪೊಲೀರು ವಿಚಾರಣೆ ನಡೆಸುತ್ತಿದ್ದಾರೆ.

ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ, ಆರು ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ಮೇಘಾ ಮಾತ್ರ ದುಡಿಯುತ್ತಿದ್ದು, ಇವರಿಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಯಾವ ಕಾರಣಕ್ಕಾಗಿ ಕೊಂದ, ಹೇಗೆ ಕೊಂದ ಮಾಹಿತಿ ವಿಚಾರಣೆ ನಂತರ ತಿಳಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!