Tuesday, March 28, 2023

Latest Posts

SKIN CARE| ಈ ತೈಲಗಳನ್ನು ಬಳಸಿದ್ರೆ ನಿಮ್ಮ ತ್ವಚೆ ತೇವಾಂಶದಿಂದ ಕೂಡಿರುತ್ತದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಖಕ್ಕೆ ಎಣ್ಣೆ ಹಚ್ಚುವುದರಿಂದ ಚರ್ಮವು ತುಂಬಾ ಎಣ್ಣೆಯುಕ್ತವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ತಪ್ಪು ಕಲ್ಪನೆ.  ಏಕೆಂದರೆ ಕೆಲವು ವಿಧದ ಎಣ್ಣೆಗಳು ಚರ್ಮವನ್ನು ಹೈಡ್ರೇಟ್ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ರಾಸಾಯನಿಕಗಳಿಂದ ತುಂಬಿರುವ ಕ್ರೀಮ್ ಮತ್ತು ಲೋಷನ್ ಗಳನ್ನು ಚರ್ಮದಿಂದ ದೂರವಿಡುವುದು ಉತ್ತಮ.

ತೆಂಗಿನ ಎಣ್ಣೆ; ತೆಂಗಿನ ಎಣ್ಣೆಯು ತ್ವಚೆಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ಚರ್ಮವನ್ನು ಆರ್ಧ್ರಕಗೊಳಿಸಲು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚಮಚ ತೆಂಗಿನೆಣ್ಣೆಯನ್ನು ಮುಖ, ಕೈ ಮತ್ತು ಪಾದಗಳಿಗೆ ಹಚ್ಚುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆಯನ್ನು ಮಾಯಿಶ್ಚರೈಸರ್ ಆಗಿ ಬಳಸಬಹುದು.

ಬಾದಾಮಿ ಎಣ್ಣೆ; ಒಣ ಚರ್ಮಕ್ಕೆ ಬಾದಾಮಿ ಎಣ್ಣೆ ಉಪಯುಕ್ತವಾಗಿದೆ. ತುರಿಕೆ, ನೋವು ಮತ್ತು ಶುಷ್ಕತೆಯನ್ನು ನಿವಾರಿಸುತ್ತದೆ. ಚರ್ಮವನ್ನು ಮೃದುಗೊಳಿಸುತ್ತದೆ. ಚರ್ಮದ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ.

ಜೊಜೊಬ ಎಣ್ಣೆ; ಒಣ ತ್ವಚೆಯನ್ನು ರಕ್ಷಿಸಲು ಜೊಜೊಬಾ ಎಣ್ಣೆ ತುಂಬಾ ಸಹಕಾರಿ. ಇದು ಸತು ಮತ್ತು ತಾಮ್ರ, ವಿಟಮಿನ್ ಬಿ ಮತ್ತು ಇ ಯಲ್ಲಿ ಸಮೃದ್ಧವಾಗಿದೆ.

ಲ್ಯಾವೆಂಡರ್ ಎಣ್ಣೆ; ಲ್ಯಾವೆಂಡರ್ ಎಣ್ಣೆ ಮೊಡವೆ ಮತ್ತು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಇದು ಚರ್ಮದ ಅಲರ್ಜಿಯನ್ನು ನಿಯಂತ್ರಿಸುತ್ತದೆ, ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

ಟಿ ಟ್ರೀ ಎಣ್ಣೆ; ಟಿ ಟ್ರೀ ಎಣ್ಣೆಯು ಚಳಿಗಾಲದಲ್ಲಿ ಚರ್ಮಕ್ಕೆ ಉತ್ತಮ ಎಣ್ಣೆಯಾಗಿದೆ. ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಶುಷ್ಕತೆ, ತುರಿಕೆ ಮತ್ತು ಉರಿಯೂತದಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ತೆಂಗಿನೆಣ್ಣೆ, ಆಲಿವ್ ಎಣ್ಣೆ, ಬಾದಾಮಿ ಎಣ್ಣೆಯ ಜೊತೆಗೆ ಇದನ್ನು ಬಳಸುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

 ಆಲಿವ್ ಎಣ್ಣೆ; ಶುದ್ಧ ಆಲಿವ್ ಎಣ್ಣೆಯು ಚರ್ಮಕ್ಕೆ ಮಾತ್ರವಲ್ಲದೆ ದೇಹದ ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಚರ್ಮವನ್ನು ಪೋಷಿಸುತ್ತದೆ ಮತ್ತು ಮುಖವನ್ನು ಮೃದುಗೊಳಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!