ಸಾಮರಸ್ಯದ ಸಂದೇಶ ಸಾರುವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ಉದ್ದೇಶ: ಮಹೇಶ ಜೋಶಿ

ಹೊಸ ದಿಗಂತ ವರದಿ,ಹಾವೇರಿ:

ಸಾಮರಸ್ಯದ ಭಾವ ಕನ್ನಡದ ಜೀವ ಎನ್ನುವ ಶೀರ್ಷಿಕೆಯಡಿಯಲ್ಲಿ ಕನಕ, ಶರೀಫ್‌ರ ಆಯ್ದ ರಚನೆಗಳನ್ನು ಗಾಯನ ಮತ್ತು ನೃತ್ಯದ ಮೂಲಕ ಸಾಮರಸ್ಯದ ಸಂದೇಶ ಸಾರುವುದೇ ಈ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ತಿಳಿಸಿದರು.
ಬುಧವಾರ ಸಮ್ಮೇಳನ ಜರಗುವ ಮುಖ್ಯ ವೇದಿಕೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಹ ಹಾವೇರಿ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಈ ಸಮದಲ್ಲಿ ಒಂದು ಗೀತೆಯ ಮೂಲಕ ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಜರುಗಲಿವೆ. ಗಂಗಾವತಿ ಪ್ರಾಣೇಶ ತಂಡದಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ. ಖಾಸೀಂ ಅಲಿ, ಹನುಮಂತ ಲಮಾನೀ ಹಾಗೂ ರುಬಿನಾ ತಂಡದವರಿಂದ ಕಾರ್ಯಕ್ರಮ ಜರುಗಲಿದೆ. ಕೊನೆಯ ದಿನ ನವೀನ ಸಂಜು ಅವರಿಂದ ಬಾರಿಸು ಕನ್ನಡ ಡಿಂಡಿಮವಾ ಕಾರ್ಯಕ್ರಮ ಜರುಗಲಿದೆ. ಕೊನೆಯ ದಿನ ಸ್ಥಳೀಯ ಕಲಾವಿದರಿಂದ ವಾದ್ಯ, ನೃತ್ಯ ಸೇರಿದಂತೆ ಕಾರ್ಯಕ್ರಮ ಜರುಗಲಿದೆ ಇಲ್ಲಿ ಹೆಚ್ಚು ಹೆಚ್ಚು ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ೮೬ ಪುಸ್ತಕಗಳು ಬಿಡುಗಡೆ ಆಗುತ್ತಿದ್ದು ಇದರಲ್ಲಿ ಹಾವೇರಿ ಜಿಲ್ಲೆಯ ಲೇಖಕರ ೩೫ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ಯಾವುದೇ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮಳನಜ ಜರುಗಿದರೂ ಆಯಾ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳು ಬಿಡುಗಡೆಯಾಗಿದ್ದಿಲ್ಲ. ಹಾವೇರಿ ಜಿಲ್ಲೆಯ ಸಾಧಕರು ಎನ್ನುವ ಶೀರ್ಶಿಕೆಯಡಿ ಅಂಬಿಗರ ಚೌಡಯ್ಯ, ಹೆಳವನ ಕಟ್ಟೆ ಗಿರಿಯಮ್ಮ, ಸೂ.ರಂ.ಯೆಕ್ಕುಂಡಿ ಸೇರಿದಂತೆ ೩೫ ಜನರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಸಮ್ಮೇಳನದ ಕಾರ್ಯಕ್ರಮದ ಪಟ್ಟಿಯಲ್ಲಿ ಪ್ರತಿಯೊಬ್ಬರಿಗೆ ಸಮಯವನ್ನು ನಿಗದಿಗೊಳಿಸಲಾಗಿದೆ. ನಿಗದಿ ಗೊಲಿಸಿದ ಸಮಯದಲ್ಲಿನೇ ಮಾತುಗಳನ್ನು ಮುಕ್ತಾಗೊಳಿಸುವಂತೆ ತಿಳಿಸಲಾಗಿದೆ. ಅದರಂತೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಲಾಗುವುದು ಸಮಯ ಮುಕ್ತಾಯವಾದರೆ ಮೈಕ್ ಬಂದ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ೧೦ ಸಾವಿರ ಜನರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಇವರಿಗೆ ಟಿಕ್‌ನ್ನು ಸಹ ನೀಡಲಾಗುವುದು. ಹೆಸರನ್ನು ನೋಂದಾಯಿಸಿಕೊಳ್ಳದವರಿಗೆ ಈ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ ಆದರೆ ಉಳಿದೆಲ್ಲ ಸಾರ್ವಜನಿಕರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.
ಮೆರವಣಿಗೆ ಸರಿಯಾಗಿ ಬೆಳಿಗ್ಗೆ ೭.೩೦ ಕ್ಕೆ ಪ್ರಾರಂಭವಾಗಲಿದೆ. ಸಾರೋಟಗಳು ಕಲಾ ತಂಡಗಳು. ಮುಖ್ಯವೇದಿಕೆಯಲ್ಲಿ ೩೦ ಸಾವಿರ ಜನರು. ಎರಡು ಸಮಾನಾಂತರ ವೇದಿಕೆಯಲ್ಲಿ ೨ ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಲ್ಲ ಸರ್ಕಾರಿ ನೌಕರರಿಗೆ ಓಓಡಿ ಸೌಲಭ್ಯವನ್ನು ನೀಡಲಾಗುವುದು. ನೋಂದಾಯಿತ ಸರ್ಕಾರಿ ನೌಕರರಿಗೆ ನೇರವಾಗಿ ಓಓಡಿ ಸೌಳಭ್ಯದ ಸರ್ಟಿಫಿಕೇಟ್ ನೀಡಿದರೆ ನೋಂದಾಯಿತರಲ್ಲದ ಸರ್ಕಾರಿ ನೌಕರರು ಅವರ ಇಲಾಖೆಯಿಂದ ಸಾಹಿತ್ಯ ಸಮೇಳನದಲ್ಲಿ ಪಾಲ್ಗೊಳ್ಳು ತೆರಳುತ್ತಿವ ಪತ್ರವನ್ನು ತಂದರೆ ಮಾತ್ರ ಓಓಡಿ ಪತ್ರವನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಓ ಮಹಮ್ಮದ ರೋಷನ್ ಹಾಗೂ ಇತರರಿದ್ದರು. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪಾ ತಾಲೂಕಾ ಅಧ್ಯಕ್ಷ ವಾಯ್.ಬಿ.ಆಲದಕಟ್ಟಿ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!